ಹೊಸ ಐಪಿಎಲ್ ನಿಯಮ: ಟಾಸ್ ನಂತರ ಆಡುವ 11ರ ಬಳಗ ಹೆಸರಿಸಲು ನಾಯಕರಿಗೆ ಅವಕಾಶ
ಹೊಸದಿಲ್ಲಿ: ಐಪಿಎಲ್ ತಂಡಗಳ ನಾಯಕರು ಟಾಸ್ ಗೆ ಮೊದಲೇ ಟೀಮ್ ಶೀಟ್‌ಗಳನ್ನು ನೀಡುವ ಬದಲು ಟಾಸ್ ನ ನಂತರ ಆಡುವ ಹನ್ನೊಂದರ ಬಳಗವನ್ನು ಹೆಸರಿಸಬಹುದು ಎಂದು ಬಿಸಿಸಿಐ ಹೊರಡಿಸಿರುವ ಹೊಸ ಆಟದ ಷರತ್ತುಗಳಲ್ಲಿ ತಿಳಿಸಿದೆ.
ಆಟದ ಷರತ್ತು 1.2.1 ರ ಪ್ರಕಾರ: ''ಪ್ರತಿ ನಾಯಕ 11 ಆಟಗಾರರನ್ನು ಹಾಗೂ ಗರಿಷ್ಠ 5 ಬದಲಿ ಫೀಲ್ಡರ್‌ಗಳನ್ನು ಟಾಸ್ ನಂತರ ಐಪಿಎಲ್ ಮ್ಯಾಚ್ ರೆಫರಿಗೆ ಲಿಖಿತವಾಗಿ ನಾಮನಿರ್ದೇಶನ ಮಾಡಬೇಕು. ಆಡುವ ಹನ್ನೊಂದರ ಸದಸ್ಯರನ್ನು ನಾಮನಿರ್ದೇಶನ ಮಾಡಿದ ನಂತರ ಎದುರಾಳಿ ನಾಯಕನ ಒಪ್ಪಿಗೆಯಿಲ್ಲದೆ ಆಟದ ಆರಂಭದ ಮೊದಲು ಆಡುವ ಬಳಗ ಬದಲಾಗಬಹುದು. ಇದರ ಅರ್ಥವೇನೆಂದರೆ, ಟಾಸ್ ನಂತರ ನಾಯಕನಿಗೆ ಪರಿಸ್ಥಿತಿಯ ಬೇಡಿಕೆಗೆ ಅನುಗುಣವಾಗಿ ತನ್ನ ಹನ್ನೊಂದರ ಬಳಗವನ್ನು ಬದಲಾಯಿಸುವ ಅಗತ್ಯವಿದೆಯೆಂದು ಭಾವಿಸಿದರೆ ಪಂದ್ಯ ಆರಂಭವಾಗುವವರೆಗೆ ಅದನ್ನು ಮಾಡಲು ಆತ ಮುಕ್ತನಾಗಿರುತ್ತಾನೆ.
ಬ್ಯಾಟರ್ ಚೆಂಡನ್ನು ಎದುರಿಸುವ ಮೊದಲೇ ವಿಕೆಟ್ ಕೀಪರ್ ತನ್ನ ಸ್ಥಾನವನ್ನು ಬದಲಾಯಿಸಿದರೆ ವಿಕೆಟ್ ಕೀಪರ್‌ಗೆ ಅನ್ಯಾಯದ ಚಲನೆಗೆ ದಂಡ ವಿಧಿಸುವುದು ಆಟದ ಪರಿಸ್ಥಿತಿಗಳಲ್ಲಿನ ಇತರ ಗಮನಾರ್ಹ ಬದಲಾವಣೆಯಾಗಿದೆ.
ಪಂದ್ಯದ ಸಮಯದಲ್ಲಿ ಅದಾಗಲೇ ಪಂದ್ಯಾವಳಿ ಸಮಿತಿ ಘೋಷಿಸಿರುವ ಐದು ಗೊತ್ತುಪಡಿಸಿದ ಬದಲಿ ಆಟಗಾರರಿಂದ ಹೊಸ ಆಟಗಾರರನ್ನು ಪರಿಚಯಿಸಬಹುದಾಗಿದೆ.