ಮೊಂಟೆಪದವು: ನಮ್ಮೂರ ಪ್ರವಾಸಿ ತಂಡದಿಂದ ರಮಝಾನ್ ಕಿಟ್ ವಿತರಣೆ

ಮೊಂಟೆಪದವು, ಮಾ.23: ನಮ್ಮೂರ ಪ್ರವಾಸಿ ತಂಡದ ವತಿಯಿಂದ ಪ್ರತಿ ವರ್ಷದಂತೆ ಪರಿಸರದ ಅರ್ಹ ಫಲಾನುಭವಿಗಳನ್ನು ಗುರುತಿಸಿ ರಮಝಾನ್ ಕಿಟ್ ವಿತರಿಸಲಾಯಿತು.
ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಸಿದ್ದೀಕ್ ಸಹದಿಯವರು ದುವಾಃ ನೆರವೇರಿಸುವುದರ ಮೂಲಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಗೂ ಪದಾಧಿಕಾರಿಗಳಾದ ಮಹಮ್ಮದ್ ಕಳಜೇರಿ, ಶಂಶುದ್ದೀನ್ UT, ಹನೀಪ್ ಕಡಬ ಉಪಸ್ಥಿತರಿದ್ದರು. ನಂತರ ಅರ್ಹ ಪಲಾನುಭವಿಗಳ ಮನೆಮನೆಗೆ ತೆರಳಿ ರಮಝಾನ್ ಕಿಟ್ ವಿತರಿಸಲಾಯಿತು.

Next Story