ಗೂಗಲ್‌ನಲ್ಲಿ ಭಾರಿ ಉದ್ಯೋಗ ಕಡಿತ: 1,400 ಉದ್ಯೋಗಿಗಳಿಂದ ಸಿಇಒ ಸುಂದರ್ ಪಿಚೈಗೆ ಬಹಿರಂಗ ಪತ್ರ
ಕ್ಯಾಲಿಫೋರ್ನಿಯಾ: ಗೂಗಲ್‌ನ (Google) ಮಾತೃ ಸಂಸ್ಥೆ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಪ್ರಕಟಿಸಿದ ಬೆನ್ನಿಗೇ ಅದರ 1,400 ಉದ್ಯೋಗಿಗಳು ಉದ್ಯೋಗ ಕಡಿತದ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ನೌಕರರನ್ನು ಉತ್ತಮವಾಗಿ ನಡೆಸಿಕೊಳ್ಳಬೇಕು ಎಂಬ ಬಹಿರಂಗ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ (Sundar Pichai) ಅವರಿಗೆ ಬರೆದಿರುವ ಈ ಬಹಿರಂಗ ಪತ್ರದಲ್ಲಿ ಸರಣಿ ಒತ್ತಾಯಗಳನ್ನು ಮಾಡಿರುವ ಉದ್ಯೋಗಿಗಳು, ನೂತನ ನೇಮಕಾತಿಯನ್ನು ಅಮಾನತಿನಲ್ಲಿಡಬೇಕು, ಕಡ್ಡಾಯ ನಿವೃತ್ತಿಗೂ ಮುನ್ನ ಸ್ವಯಂನಿವೃತ್ತಿಗೆ ಅವಕಾಶ ಒದಗಿಸಬೇಕು, ಖಾಲಿ ಇರುವ ಹುದ್ದೆಗಳಿಗೆ ವಜಾಗೊಂಡ ಉದ್ಯೋಗಿಗಳಿಗೆ ಆದ್ಯತೆ ನೀಡಬೇಕು ಮತ್ತು ಭತ್ಯೆ ಹೊಂದಿರುವ ಆರೋಗ್ಯ ಮತ್ತು ನಷ್ಟಗೊಳ್ಳುವ ರಜೆಯಂತಹ ಅವಧಿಯನ್ನು ಪೂರೈಸಲು ಉದ್ಯೋಗಿಗಳಿಗೆ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದರೊಂದಿಗೆ, ಬಿಕ್ಕಟ್ಟು ಸಕ್ರಿಯವಾಗಿರುವ ಉಕ್ರೇನ್‌ನಂತಹ ದೇಶಗಳಲ್ಲಿ ಅಥವಾ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಇರುವಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದನ್ನು ತಡೆಯಬೇಕು ಮತ್ತು ವೀಸಾ ಸಂಬಂಧಿತ ಉದ್ಯೋಗ ನಷ್ಟದೊಂದಿಗೆ ನಿವಾಸ ನಷ್ಟ ಅನುಭವಿಸುವ ಸ್ಥಿತಿಯಲ್ಲಿರುವ ಉದ್ಯೋಗಿಗಳಿಗೆ ಹೆಚ್ಚು ನೆರವು ನೀಡಬೇಕು ಎಂದೂ ಆಲ್ಫಾಬೆಟ್ ಸಂಸ್ಥೆಗೆ ಮನವಿ ಮಾಡಲಾಗಿದೆ.
"ಉದ್ಯೋಗ ಕಡಿತ ಮಾಡುವ ಆಲ್ಫಾಬೆಟ್ ನಿರ್ಣಯದ ಪರಿಣಾಮವು ಜಾಗತಿಕವಾಗಿದೆ. ಎಲ್ಲಿಯೂ ಉದ್ಯೋಗಿಗಳ ಮಾತನ್ನು ಸಾಕಷ್ಟು ಕೇಳಿಸಿಕೊಳ್ಳಲಾಗಿಲ್ಲ ಮತ್ತು ಉದ್ಯೋಗಿಗಳಾಗಿ ನಾವು ಒಂಟಿಯಾಗಿರುವುದಕ್ಕಿಂತ ಹೆಚ್ಚು ಬಲಿಷ್ಠವಾಗಿರುತ್ತೇವೆ ಎಂದು ನಮಗೆ ತಿಳಿದಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.
ಆದರೆ, ಈ ಮನವಿ ಪತ್ರದ ಕುರಿತು ಆಲ್ಫಾಬೆಟ್ ವಕ್ತಾರರು ತಕ್ಷಣವೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ದಯವಿಟ್ಟು ನೀವು ಈಗಲಾದರೂ ಕೇಳಿಸಿಕೊಳ್ಳುತ್ತೀರಾ?: ಡೆತ್ ನೋಟ್ ನಲ್ಲಿ 17 ವರ್ಷದ ಬಾಲಕಿಯ ಮನವಿ