ಮಂಗಳೂರು: ಸೈಂಟ್ ಅಲೋಶಿಯಸ್ ಬಿ.ಎಡ್ ಕಾಲೇಜು ವತಿಯಿಂದ 17ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಮಂಗಳೂರು: ನಗರದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಸೈಂಟ್ ಅಲೋಶಿಯಸ್ ಬಿ.ಎಡ್ ಕಾಲೇಜು ವತಿಯಿಂದ ಮಾರ್ಚ್ 20 ರಂದು 17ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ಪರಿಷತ್ ಉಪಾಧ್ಯಕ್ಷೆ ಪ್ರೀತಿ ಪೈಸ್ ಅವರ ಪ್ರಾಸ್ತಾವಿಕ ಮಾತುಗಳೊಂದಿಗೆ ಹಾಗೂ ಪ್ರಾರ್ಥನಾಗೀತೆ ಹಾಡುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
ಸ್ವಾಗತ ಭಾಷಣ ಮಾಡಿದ ಪ್ರಾಂಶುಪಾಲೆ ಡಾ. ಫರೀತಾ ವೇಗಸ್, "ವಿದ್ಯಾರ್ಥಿಗಳಲ್ಲಿ ಪರಿವರ್ತನೆಯನ್ನು ಪ್ರಾರಂಭಿಸುವ ಪ್ರಮುಖ ದಿನ ಕಾಲೇಜಿಗೆ ಆಗಮಿಸಿದ ಮೊದಲ ದಿನವಾಗಿರುತ್ತದೆ. ಶಿಕ್ಷಣ ನೀಡುವ ಕಾರ್ಯಕ್ರಮವು ಕೇವಲ ಒಂದು ಪದವಿ ಗಳಿಸುವುದಕ್ಕೆ ಸೀಮಿತವಾಗಿಲ್ಲ. ಕ್ರಿಯಾತ್ಮಕ ಸಮಾಜದ ಬೆಳವಣಿಗೆಗಳು ಮತ್ತು ಸವಾಲುಗಳನ್ನು ಎದುರಿಸಲು ಸಮರ್ಥ ಶಿಕ್ಷಕ ಅಭ್ಯರ್ಥಿಗಳನ್ನು ಸಿದ್ಧಪಡಿಸುವ ಸಲುವಾಗಿ ಈ ಕೋರ್ಸ್ ರೂಪಿಸಲಾಗಿದೆ" ಎಂದು ಅವರು ಹೇಳಿದರು.
ಈ ವೇಳೆ ಮಾತನಾಡಿದ ಕಾಲೇಜಿನ ಸಂಚಾಲಕ ರೆ.ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ ಅವರು ಭಾರತದಲ್ಲಿ ಮತ್ತು ಮಂಗಳೂರಿನಲ್ಲಿ ಜೆಸ್ಯೂಟ್ ಶಿಕ್ಷಣದ ಬೆಳವಣಿಗೆಯ ಬಗ್ಗೆ ವಿವರಿಸಿದರು.
19-21ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಯಾಗಿರುವ ಎಲಿಝಬೆತ್ ಸೆಬಾಸ್ಟಿಯನ್ ಅವರು ತಮ್ಮ ಬೋಧನಾ ಕೌಶಲ್ಯವನ್ನು ಸುಧಾರಿಸಲು ಮತ್ತು ಪ್ರತಿಭೆಯನ್ನು ಸುಧಾರಿಸಲು B. Ed ಕಾರ್ಯಕ್ರಮವು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಭಾರ ಸಿಬ್ಬಂದಿಗಳಾದ ಸಂಧ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.
-