ದೇಶದಲ್ಲಿಯ ಪ್ರಚಲಿತ ಸನ್ನಿವೇಶದಲ್ಲಿ ‘ಗುಜರಾತಿ ’ಮಾತ್ರ ವಂಚಕನಾಗಬಲ್ಲ: ತೇಜಸ್ವಿ ಯಾದವ್

ಹೊಸದಿಲ್ಲಿ,ಮಾ.23: ದೇಶದಿಂದ ಪರಾರಿಯಾಗಿರುವ ವಜ್ರಾಭರಣಗಳ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ರೆಡ್ ಕಾರ್ನರ್ ನೋಟಿಸನ್ನು ಇಂಟರ್ಪೋಲ್ ಹಿಂದೆಗೆದುಕೊಂಡಿರುವ ಬೆನ್ನಲ್ಲೇ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು,ದೇಶದಲ್ಲಿಯ ಸ್ಥಿತಿ ಹೇಗಿದೆಯೆಂದರೆ ಗುಜರಾತಿಗಳ ವಂಚನೆಯನ್ನು ಕ್ಷಮಿಸಲಾಗುವುದರಿಂದ ಓರ್ವ ‘ಗುಜರಾತಿ ’ ಮಾತ್ರ ವಂಚಕನಾಗಲು ಸಾಧ್ಯ ಎಂದು ಗುರುವಾರ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು,ಎಲ್ಐಸಿ ಅಥವಾ ಬ್ಯಾಂಕುಗಳ ಹಣದೊಂದಿಗೆ ಯಾರಾದರೂ ಪರಾರಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಬಿಹಾರ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಹೈಜಾಕ್ ಮಾಡಿರುವುದಕ್ಕಾಗಿ ಮತ್ತು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳಿರುವುದಕ್ಕಾಗಿ ಕೇಂದ್ರ ಸರಕಾರವನ್ನು ಟೀಕಿಸಿದರು.
Next Story





