ರಾಹುಲ್ ಗಾಂಧಿ ಸದಸ್ಯತ್ವ ಅನರ್ಹ; ಸಂಸದೀಯ ಪ್ರಜಾಪ್ರಭುತ್ವಕ್ಕೆ ಜಡಿದ ಕೊನೆಯ ಮೊಳೆ: ಬಿ.ಕೆ.ಹರಿಪ್ರಸಾದ್ ಕಿಡಿ

ಬೆಂಗಳೂರು, ಮಾ.24: ರಾಹುಲ್ ಗಾಂಧಿ ಅವರ ಸದಸ್ಯತ್ವ ಅನರ್ಹ-ಮೋದಿ ಸರಕಾರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಜಡಿದ ಕೊನೆಯ ಮೊಳೆ. ರಾಹುಲ್ ಗಾಂಧಿಯವರನ್ನ ರಾಜಕೀಯವಾಗಿ ಎದುರಿಸಲಾಗದ 56 ಇಂಚಿನ ಎದೆ, ದಿಲ್ಲಿಯ ರಣ ಬಿಸಿಲಿನಲ್ಲೂ ಗಡ ಗಡ ನಡಗುತ್ತಿರುವುದು ಸ್ಪಷ್ಟ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಗಾರಿದ್ದಾರೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಕಾರ್ಯಾಂಗ, ಸಂಸದೀಯ ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನೆ ಕೇಂದ್ರದ ಸರ್ವಾಧಿಕಾರಿ ಪ್ರಭುತ್ವ ಸಂಪೂರ್ಣ ಬುಡಮೇಲು ಮಾಡಿದೆ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ದ್ವೇಷ, ಅನೈತಿಕ ರಾಜಕಾರಣ ಇಂದಿನ ತಲೆಮಾರು ನೋಡುತ್ತಿರುವುದು ದುರಂತ ಎಂದು ತಿಳಿಸಿದ್ದಾರೆ.
ಒಂದು ಫ್ಯಾಶಿಸ್ಟ್ ಸರಕಾರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಪ್ರಮಾದ ಎಸಗಿದೆ. ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಅಪಚಾರ ಮಾಡಿದೆ. ವಿಪಕ್ಷ ನಾಯಕರ ದನಿಯನ್ನೆ ದಮನಮಾಡುವ ನೀತಿಗಳ ವಿರುದ್ಧ ದೇಶ ಎದ್ದು ನಿಲ್ಲಬೇಕಿದೆ. ದೇಶದಲ್ಲಿ ಬಿಜೆಪಿ ವಿನಾಶದ ದಿನಗಳನ್ನ, ರಾಜ್ಯದಲ್ಲಿ ಕ್ಷಣಗಳನ್ನ ಎದುರು ನೋಡುತ್ತಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಜಗತ್ತಿನ ಸರ್ವಾಧಿಕಾರಿ ಹಿಟ್ಲರ್ ನ ಕ್ರೌರ್ಯಗಳು ಇತಿಹಾಸ ಮರೆತಿಲ್ಲ, ಮರೆಯುವುದೂ ಇಲ್ಲ. ಕಾಲ ದೇಶ ವರ್ತಮಾನ ಮುಖಾಮುಖಿಯಾಗಬೇಕಿದೆ. ಸಬ್ ಕುಚ್ ಯಾದ್ ರಹೇಗಾ.. ಪ್ರಶ್ನೆ ಘೋರವಾಗಿರುವಾಗ ಉತ್ತರ ಘನಘೋರವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀ ರಾಹುಲ್ ಗಾಂಧಿ ಅವರ ಸದಸ್ಯತ್ವ ಅನರ್ಹ-ಮೋದಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಜಡಿದ ಕೊನೆಯ ಮೊಳೆ.
— Hariprasad.B.K. (@HariprasadBK2) March 24, 2023
ರಾಹುಲ್ ಗಾಂಧಿಯವರನ್ನ ರಾಜಕೀಯವಾಗಿ ಎದುರಿಸಲಾಗದ 56 ಇಂಚಿನ ಎದೆ, ದೆಹಲಿಯ ರಣ ಬಿಸಿಲಿನಲ್ಲೂ ಗಡ ಗಡ ನಡಗುತ್ತಿರುವುದು ಸ್ಪಷ್ಟ.
1/4#BlackDayForIndianDemocracy