ಪೇಜಾವರ ಉರೂಸ್ ಸಮಾರಂಭ
ಮಂಗಳೂರು : ಬಜ್ಪೆ ಸಮೀಪದ ಪೇಜಾವರ (ಪೇರ) ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ವಠಾರದ ಹಝ್ರತ್ ಶೈಖ್ ವಲಿಯುಲ್ಲಾಹಿಯ 15 ನೇ ಉರೂಸ್ ಸಮಾರಂಭವು ಇತ್ತೀಚೆಗೆ ನಡೆಯಿತು.
ಉರೂಸ್ ಕಾರ್ಯಕ್ರಮದ ಪ್ರಯುಕ್ತ ಸ್ವಲಾತ್ ಮಜ್ಲಿಸ್, ನೂರೇ ಅಜ್ಮೀರ್, ಧಾರ್ಮಿಕ ಪ್ರವಚನ ನಡೆಯಿತು. ಬೊಳ್ಳೂರು ಶೈಖುನಾ ಅಲ್ಹಾಜ್ ಅಝ್‌ಘರ್ ಫೈಝಿ ದುಆಗೈದು ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ, ಜಮಾತಿನ ಅಧ್ಯಕ್ಷ ಪ್ರೊ.ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಫ್‌ಯಾನ್ ಸಖಾಫಿ ಕಾವಳಕಟ್ಟೆ ಮುಖ್ಯ ಭಾಷಣಗೈದರು.
ಅತಿಥಿಗಳಾಗಿ ಇಸ್ಮಾಯಿಲ್ ಮನ್ಸೂರ್ ಸಅದಿ ಅಲ್-ಕಾಮಿಲ್, ಧರ್ಮಗುರು ಫಾ.ರೂಪೇಶ್ ಮಾಡ್ತಾ, ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೊ ಮತ್ತಿತರರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಮಸೀದಿಯ ಉಪಾಧ್ಯಕ್ಷ ಎಂ.ಎಚ್. ಹನೀಫ್, ಕಾರ್ಯದರ್ಶಿ ಹಸನ್ ರಿಯಾಝ್ ಹಾಗೂ ಮುಹಮ್ಮದ್ ಸಾಲಿ ಇಸ್ಮಾಯಿಲ್ ಇಂಜಿನಿಯರ್ ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.