ಬ್ರೆಝಿಲ್‍ನ ಮಾಜಿ ಅಧ್ಯಕ್ಷ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ

ಶಾಂಘೈ, ಮಾ.24: ಬ್ರಿಕ್ಸ್ ದೇಶಗಳು ಸ್ಥಾಪಿಸಿರುವ ಬಹುಪಕ್ಷೀಯ ಹಣಕಾಸು ಸಂಸ್ಥೆ `ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್'ನ ಅಧ್ಯಕ್ಷರಾಗಿ ಬ್ರೆಝಿಲ್‍ನ ಮಾಜಿ ಅಧ್ಯಕ್ಷ ಡಿಲ್ಮಾ ರೂಸೆಫ್‍ರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ.
ಬ್ರಿಕ್ಸ್(ಬ್ರೆಝಿಲ್, ರಶ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ದೇಶಗಳ ಹಣಕಾಸು ಸಂಸ್ಥೆ ಎನ್‍ಡಿಬಿ ಚೀನಾದ ಶಾಂಘೈಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಬ್ರೆಝಿಲ್‍ನವರೇ ಆದ ಮಾರ್ಕಸ್ ಟ್ರೋಯ್ಜೊ ಇದುವರೆಗೆ ಬ್ಯಾಂಕ್‍ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
Next Story