ಕುಂದಾಪುರ: ಆರು ಜೋಡಿಗಳಿಗೆ ಸಾಮೂಹಿಕ ವಿವಾಹ

ಕುಂದಾಪುರ : ಸೌದಿ ಅರೇಬಿಯಾದ ಉದ್ಯಮಿ, ಅಲ್ ಮಿರ್ಜಾ ಗ್ರೂಪ್ನ ಆಸಿಫ್ ಪಾರಂಪಳ್ಳಿ ಹಾಗೂ ಪ್ರೆಸಿಡೆಂಟ್ ಗ್ರೂಪ್ನ ಅಬ್ದುಲ್ ಸತ್ತಾರ್ ಕೋಟೇಶ್ವರ ಸಾರಥ್ಯದಲ್ಲಿ ಹಾಗೂ ಕೋಡಿಕನ್ಯಾನ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಸಹಕಾರದೊಂದಿಗೆ ಆರು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಇತ್ತೀಚೆಗೆ ತೆಕ್ಕತೆ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ನಲ್ಲಿ ನೆಡೆಯಿತು.
ಅಸೈಯ್ಯದ್ ಕೆ.ಎಸ್.ಆಟಕೊಯ ತಂಙಳ್ ಕುಂಬೊಳ್ ದುವಾ ನೆರವೇರಿಸಿ ದರು. ಉಡುಪಿ ಜಿಲ್ಲಾ ಖಾಝಿ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನಿಖಾ ನೆರವೇರಿಸಿದರು. ಕಾರ್ಯಕ್ರಮವನ್ನು ಮಂಗಳೂರು ನಂಡೆ ಪೆಂಗಲ್ ಅಭಿಯಾನದ ರಫೀಕ್ ಮಾಸ್ಟರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಬ್ಯಾರಿ ವಹಿಸಿದ್ದರು.
ಅಸೈಯ್ಯದ್ ಜಾಫರ್ ಅಸಖಾಫ್ ತಂಙಳ್ ಕೋಟೇಶ್ವರ, ಮಸೀದಿ ಖತೀಬ್ ಅಬೂಬಕರ್ ಸಿದ್ದೀಕ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಹದಿ, ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಅಲ್ಮುಜೈನ್ ಸೌದಿ ಅರೇಬಿಯಾದ ಉದ್ಯಮಿ ಝಾಕ್ರಿಯಾ ಜೋಕಟ್ಟೆ, ಬಿ.ಎಂ.ಷರೀಫ್, ನಂಡೆ ಪೆಂಗಲ್ ಅಭಿಯಾನದ ಅಧ್ಯಕ್ಷ ಮುಮ್ತಾಝ್ ಅಲಿ ಕೃಷ್ಣಾಪುರ, ಯೂನುಸ್, ಸಾಮೂಹಿಕ ವಿವಾಹ ಸಮಿತಿಯು ಸಂಚಾಲಕ ಇಬ್ರಾಹಿಂ ಪಾರಂಪಳ್ಳಿ, ಕೆ.ಹುಸೇನ್ ಕೋಟ, ಸಹ ಸಂಚಾಲಕ ಅಬ್ಬಾಸ ಅಲಿ ಕೋಡಿಕನ್ಯಾನ, ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಸ್ವಾಗತಿಸಿದರು. ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು.







