ಮಂಗಳೂರಿನಲ್ಲಿ ದಾಳಿಗೆ ಬಿಜೆಪಿ ಸರಕಾರದ ಮೌನವೇ ಬೆಂಬಲ: ಅಮೃತ್ ಶೆಣೈ ಖಂಡನೆ

ಉಡುಪಿ: ಮಂಗಳೂರಿನಲ್ಲಿ ಇಂದು ಯುವಕರು ಹೋಳಿ ಆಚರಣೆಗೆ ಹಮ್ಮಿಕೊಂಡ ಕಾರ್ಯಕ್ರಮದ ಮೇಲೆ ಏಕಾಏಕಿ ದಾಳಿ ನಡೆಸಿರುವುದು ತೀರಾ ಅನಾಗರಿಕ ಹಾಗೂ ಗೂಂಡಾಗಿರಿ ವರ್ತನೆ ಎಂದು ಉಡುಪಿ ಸಹಬಾಳ್ವೆ ತಂಡದ ಅಧ್ಯಕ್ಷ ಅಮೃತ್ ಶೆಣೈ ಖಂಡಿಸಿದ್ದಾರೆ.
ಮಂಗಳೂರಿನಲ್ಲಿ ಪದೇ ಪದೇ ಯುವ ಸಮುದಾಯದ ಮೇಲೆ ನಡೆಯುವ ಈ ಗೂಂಡಾಗಿರಿ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಗೆ ಮಾರಕವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾದ ಮಂಗಳೂರಿಗೆ ದೂರದ ಊರಿನ ವಿದ್ಯಾರ್ಥಿಗಳನ್ನು ಕಳುಹಿಸಲು ಅಂಜುವ ವಾತಾವರಣ ಉಂಟಾಗಿದೆ. ನೇರ ವಾಗಿ ಗೂಂಡಾಗಿರಿ ಮಾಡಿ ದಬ್ಬಾಳಿಕೆ ಮಾಡಿದರೂ ಶಾಸಕರು ಸಂಸದರು ಬಾಯಿ ಮುಚ್ಚಿ ಕೂರುತ್ತಾರೆ. ಬಿಜೆಪಿ ಸರಕಾರ ಮೌನವಾಗಿ ಇಂತಹ ಕೃತ್ಯಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಚುನಾವಣೆ ನಡೆಯುವ ಸಂದರ್ಭದಲ್ಲಿ ಇಂತಹ ಘಟನೆಗಳು ಬಹಳ ಅಪಾಯಕಾರಿ. ಸರಕಾರ ಕೂಡಲೇ ಬಿಗಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಮೃತ್ ಶೆಣೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story