ಚೊಚ್ಚಲ WPL ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ಗಳ ಜಯ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ಗಳ ಜಯ
ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (WPL) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 132 ರನ್ ಗುರಿ ಬೆನ್ನಟ್ಟಿ, 7 ವಿಕೆಟ್ ಗಳ ಜಯದ ಮೂಲಕ ಮುಂಬೈ ಇಂಡಿಯನ್ಸ್ ಚೊಚ್ಚಲ WPL ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿಗೆ ಆರಂಭಿಕ ಹಿನ್ನಡೆಯ ಹೊರತಾಗಿಯೂ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡುವಲ್ಲಿ ಸಫಲವಾಯಿತು. ದಿಲ್ಲಿ ಪರ ನಾಯಕಿ ಮೆಗ್ ಲ್ಯಾನಿಂಗ್ 29 ಎಸೆತಗಳಲ್ಲಿ 35 ರನ್ ಸಿಡಿಸಿದರೆ, ರಾಧಾ ಮತ್ತು ಶಿಖಾ ತಲಾ 27 ರನ್ ಗಳಿಸಿ ಆಸರೆಯಾದರು.
ಮುಂಬೈ ಇಂಡಿಯನ್ಸ್ ಪರ ಆಲ್ ರೌಂಡರ್ ನತಾಲಿ ಶಿವರ್ ಅವರ ಅಜೇಯ 60 ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 37 ರನ್ ಗಳ ನೆರವಿನಿಂದ 19.3 ಓವರ್ ಗಳಲ್ಲಿ ಗುರಿ ತಲುಪಿ 7 ವಿಕೆಟ್ ಗಳ ಜಯಭೇರಿ ಬಾರಿಸಿತು.
Next Story