ಕಾಲುವೆಗೆ ಉರುಳಿ ಬಿದ್ದ ಸ್ಕೂಟರ್: ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಮಂಡ್ಯ: ಅಯತಪ್ಪಿ ಸ್ಕೂಟರ್ ಒಂದು ಕಾಲುವೆಗೆ ಉರುಳಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಮ್ಮನಾಯಕನಹಳ್ಳಿ ಗ್ರಾಮದ ಬಳಿ ರವಿವಾರ ಬೆಳಗ್ಗೆ ನಡೆದಿದೆ.
ನಗರದ ಗುತ್ತಲು ಬಡಾವಣೆ ಇಂದಿರಾ ಕಾಲನಿಯ ಪ್ರಜ್ವಲ್(18) ಹಾಗೂ ವರುಣ್(12) ಘಟನೆಯಲ್ಲಿ ಸಾವನ್ನಪ್ಪಿದ್ಧಾರೆ.
ಸ್ಥಳಕ್ಕೆ ಎಎಸ್ಪಿ ಸಿ.ಇ.ತಿಮ್ಮಯ್ಯ, ಡಿವೈಎಸ್ಪಿ ಓಂಪ್ರಕಾಶ್, ಇನ್ಸ್‍ಪೆಕ್ಟರ್ ಸಿದ್ದಪ್ಪ ಭೇಟಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story