ಬಿಜೆಪಿ ಶಾಸಕ, ಸಂಸದರೊಂದಿಗೆ ವೇದಿಕೆ ಹಂಚಿಕೊಂಡ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿ
ಹೊಸದಿಲ್ಲಿ: 2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಶಿಕ್ಷೆ ಪೂರ್ಣಗೊಳ್ಳುವ ಮೊದಲು ಬಿಡುಗಡೆಗೊಂಡ 11 ಮಂದಿಯಲ್ಲಿ ಒಬ್ಬ ಅಪರಾಧಿ ನಿನ್ನೆ ಗುಜರಾತ್‌ನಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕ, ಸಂಸದರೊಂದಿಗೆ ವೇದಿಕೆ ಹಂಚಿಕೊಂಡಿದ್ದಾನೆ. ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ ಕುಟುಂಬಸ್ಥರನ್ನು ಕೊಂದ ಅಪರಾಧಿಗಳ ಅವಧಿಪೂರ್ಣ ಬಿಡುಗಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಸೋಮವಾರ ಪ್ರಕರಣದ ವಿಚಾರಣೆ ನಡೆಯಲಿದೆ.
ನೀರು ಸರಬರಾಜು ಯೋಜನೆ ಕಾರ್ಯಕ್ರಮವು ಮಾರ್ಚ್ 25 ರಂದು ದಾಹೋದ್ ಜಿಲ್ಲೆಯ ಕರ್ಮಾಡಿ ಗ್ರಾಮದಲ್ಲಿ ನಡೆದಿದ್ದೂ, ಈ ಕಾರ್ಯಕ್ರಮದಲ್ಲಿ ಅಪರಾಧಿಯಲ್ಲೋರ್ವ ಶೈಲೇಶ್ ಚಿಮನ್‌ಲಾಲ್ ಭಟ್ ಎಂಬಾತ ದಾಹೋದ್ ಸಂಸದ ಜಸ್ವಂತ್ ಸಿನ್ಹ್ ಭಭೋರ್ ಮತ್ತು ಲಿಮ್ಖೇಡಾ ಶಾಸಕ ಸೈಲೇಶ್ ಭಭೋರ್ ಅವರೊಂದಿಗೆ ವೇದಿಕೆಯಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಆದರೆ, ಇದುವರೆಗೂ ಈ ಉಭಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Next Story