ದೇವೇಗೌಡರ ವಿರುದ್ಧ ಮಾನಹಾನಿಕಾರ ಟ್ವೀಟ್: ಪೋಸ್ಟ್ ಅಳಿಸಿ ಕ್ಷಮೆ ಯಾಚಿಸಿದ ಪ್ರಶಾಂತ್ ಸಂಬರಗಿ
ಬೆಂಗಳೂರು, ಮಾ.27: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ವಿರುದ್ಧ ಜೆಡಿಎಸ್ ಕಾನೂನು ಘಟಕ ದೂರು ದಾಖಲಿಸಿದೆ.
ಸಂಬರಗಿ ಸಾಮಾಜಿಕ ಜಾಲತಾಣವಾದ ಟ್ವಿಟರ್ ಮತ್ತು ಫೇಸ್ ಬುಕ್ ನ ತಮ್ಮ ಖಾತೆಯಲ್ಲಿ ಆಧಾರರಹಿತ ಮತ್ತು ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುವ ಮೂಲಕ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ವರ್ಚಸ್ಸಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಡಿಸಿಪಿ (ಕೇಂದ್ರ) ಶ್ರೀನಿವಾಸಗೌಡರಿಗೆ ದೂರು ಸಲ್ಲಿಸಿದ್ದಾರೆ.
ಸಂಬರಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಮಾನತುಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
''ಕ್ಷಮೆ ಯಾಚಿಸಿದ ಪ್ರಶಾಂತ್ ಸಂಬರಗಿ''
ಈ ನಡುವೆ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಟ್ವೀಟ್ ಮೂಲಕ ಕ್ಷಮೆ ಕೋರಿದ ಪ್ರಶಾಂತ್ ಸಂಬರಗಿ, ಟ್ವಿಟರ್ ಮತ್ತು ಫೇಸ್ ಬುಕ್ ನಿಂದ ವಿವಾದಕ್ಕೆ ಕಾರಣವಾದ ತಮ್ಮ ಪೋಸ್ಟನ್ನು ಅಳಿಸಿ ಹಾಕಿದ್ದಾರೆ.
"ನನ್ನ ತಂದೆ ಸಮಾನರಾದ ದೇವೆಗೌಡ್ರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾರಣೆಯಾಗಿ ದೇವೆ ಗೌಡ ಎಂದು ಹೆಸರನ್ನು ಬಳಸಿದೆ ಹೊರತು ಯಾವುದೇ ದುರುದ್ವೇಷ ವಿರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚ್ಯುತಿ ತರಲು ಬಳಸಲಿಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ನನ್ನ ಕಳ ಕಳಿಯ ಕ್ಷಮೆ ವಿರಲಿ" ಎಂದು ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದಾರೆ.
ನನ್ನ ತಂದೆ ಸಮಾನರಾದ Shri ದೇವೆಗೌಡ್ರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾರಣೆಯಾಗಿ ದೇವೆ ಗೌಡ ಎಂದು ಹೆಸರನ್ನು ಬಳಸಿದೆ ಹೊರತು ಯಾವುದೇ ದುರುದ್ವೇಷ ವಿರಲಿಲ್ಲ
— Veera Prashanth Sambargi (@vip_sambaragi) March 25, 2023
ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚುತ್ತಿ ತರಲು ಬಳಸಲಿಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ನನ್ನ ಕಳ ಕಳಿಯ ಕ್ಷಮೆ ವಿರಲಿ#sorry