Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾಲ್ಕಿ ಕ್ಷೇತ್ರ: ಕಾಂಗ್ರೆಸ್...

ಭಾಲ್ಕಿ ಕ್ಷೇತ್ರ: ಕಾಂಗ್ರೆಸ್ ಭದ್ರಕೋಟೆಯಲ್ಲಿ ನಡೆದೀತೆ ಬಿಜೆಪಿ ಆಟ?

ಆರ್.ಕೆ.ಆರ್.ಕೆ.27 March 2023 2:30 PM IST
share
ಭಾಲ್ಕಿ ಕ್ಷೇತ್ರ: ಕಾಂಗ್ರೆಸ್ ಭದ್ರಕೋಟೆಯಲ್ಲಿ ನಡೆದೀತೆ ಬಿಜೆಪಿ ಆಟ?

ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಖಂಡ್ರೆಗೆ ಯಾರು ಎದುರಾಳಿ? | ಕಾಂಗ್ರೆಸ್ ಭದ್ರಕೋಟೆಯಲ್ಲಿ ಫಲ ಕೊಡುವುದೇ ಬಿಜೆಪಿಯ ರಣತಂತ್ರ? | ಬಂಡಾಯಕ್ಕೆ ಬಸವಳಿದ ಕಮಲ ಪಾಳಯದಲ್ಲಿನ ಕಸರತ್ತುಗಳೇನು? | ಜೆಡಿಎಸ್‌ಗೆ ನೆಲೆಯಿಲ್ಲದ ಭಾಲ್ಕಿ ಅಖಾಡದಲ್ಲಿ ಹೇಗಿರಲಿದೆ ಪೈಪೋಟಿ?

ಈಶ್ವರ ಖಂಡ್ರೆ

ಈಶ್ವರ ಖಂಡ್ರೆ. ಕಾಂಗ್ರೆಸ್‌ನ ಪ್ರಭಾವಿ ನಾಯಕ. ಬೀದರ್ ಜಿಲ್ಲೆ ಭಾಲ್ಕಿ ಕ್ಷೇತ್ರದ ಶಾಸಕ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಪುತ್ರ ಈಶ್ವರ ಖಂಡ್ರೆ ಮೂರು ಬಾರಿ ಶಾಸಕ ರಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾಗಿದ್ದರು. ಪ್ರಸಕ್ತ ಕೆಪಿಸಿಸಿ ಕಾರ್ಯಾಧ್ಯಕ್ಷರು.

ಇನ್ನೂ ಕಾಡುತ್ತಿರುವ ಸೋಲು

ಇದೆಲ್ಲದರ ನಡುವೆಯೂ, ಪರಮೇಶ್ವರ್ ಈ ಬಾರಿ ಗೆಲ್ಲಲೇಬೇಕೆಂಬ ಹಠದಲ್ಲಿದ್ದಾರೆ. ೨೦೧೩ರ ಚುನಾವಣೆ ಯಲ್ಲಿ ಅನುಭವಿಸಿದ ಸೋಲು ಈಗಲೂ ಅವರನ್ನು ಕಾಡುತ್ತಿದೆ. ಕೊರಟಗೆರೆ ಕ್ಷೇತ್ರದ ಜನ ತಮ್ಮನ್ನು ಎರಡು ಬಾರಿ ಗೆಲ್ಲಿಸಿರುವುದು ನಿಜವಾದರೂ ರಾಜ್ಯದ ಮುಖ್ಯ ಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದ ಸಂದರ್ಭದಲ್ಲಿ ಸೋಲಿಸಿಬಿಟ್ಟರು ಎಂಬುದನ್ನು ಇತ್ತೀಚೆಗೆ ಕೂಡ ಅವರು ವಿಷಾದದಿಂದ ನೆನಪು ಮಾಡಿಕೊಂಡಿದ್ದರು.

ಹಾಗಾಗಿಯೊ ಏನೊ, ಕಳೆದ ೬ ತಿಂಗಳಿಂದ ಕ್ಷೇತ್ರದಲ್ಲಿ ನಿರಂತರ ಓಡಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪ್ರಯತ್ನ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೂ ಪರಮೇಶ್ವರ್ ಜನರ ಕೈಗೆ ಸುಲಭವಾಗಿ ಸಿಗುವವರಲ್ಲ ಎಂಬ ಆರೋಪಗಳು ಇದ್ದೇ ಇವೆ.

ಆದರೆ, ಗೃಹಸಚಿವರಾಗಿದ್ದ ವೇಳೆ ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳು ಕೈಹಿಡಿಯಬಹುದು ಎಂಬ ವಿಶ್ವಾಸ ಅವರದು. ಆಗ ಮಾಡಿದ್ದ ಕೊರಟಗೆರೆ ಪೊಲೀಸ್ ತರಬೆತಿ ಕೇಂದ್ರ, ಅಗ್ನಿಶಾಮಕ ಠಾಣೆ, ಸುಸಜ್ಜಿತ ಆಸ್ಪತ್ರೆ, ಶಾಲಾ ಕಟ್ಟಡಗಳು, ಎಲ್ಲ ಗ್ರಾಮಗಳಿಗೆ ಅತ್ಯಾಧುನಿಕ ಪಂಚಾಯತ್ ಕಟ್ಟಡ ಮೊದಲಾದವು ಅವರ ಸಾಧನೆಯನ್ನು ಹೇಳುತ್ತಿವೆ. ಅದಕ್ಕಾಗಿ ಜನಮೆಚ್ಚುಗೆಯೂ ಇದೆ. ರಾಹುಲ್ ಪಾದಯಾತ್ರೆ, ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂಚರಿಸಿರುವುದು, ಪಕ್ಷ ಸಂಘಟನೆಗೆ ನೀಡಿರುವ ಒತ್ತು ಇವೆಲ್ಲವೂ ಪರಮೇಶ್ವರ್ ಗೆಲುವಿಗೆ ನೆರವಾದಾವು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಕೂಡ ಅವರ ಪಾಲಿಗೆ ಇದ್ದೇ ಇದೆ. ಮತ್ತೊಮ್ಮೆ ದಾಖಲೆ ಅಂತರದ ಗೆಲುವು ಸಾಧಿಸುವ ಹಂಬಲ ಮತ್ತು ಹುಮ್ಮಸ್ಸಿ ನಲ್ಲಿಯೇ ಕ್ಷೇತ್ರದಲ್ಲಿ ಪರಮೇಶ್ವರ್ ತಿರುಗಾಟ ಸಾಗಿದೆ.

ನಿಜಾಮನ ಕಾಲದಲ್ಲೂ ಕನ್ನಡದ ಕೆಚ್ಚು ಮೆರೆದಿದ್ದ ನೆಲ ಭಾಲ್ಕಿ. ಈಗ ರಾಜಕೀಯವೂ ಜೋರಾಗಿಯೇ ಇರುವುದು ಸುಳ್ಳಲ್ಲ. ಭಾಲ್ಕಿ ಎಂದರೆ ಕಾಂಗ್ರೆಸ್ ಭದ್ರಕೋಟೆ ಎಂಬಂತಾಗಿ ಬಹಳ ವರ್ಷಗಳೇ ಆಗಿವೆ. ಕೈ ಸತತ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡುವ ವಿರೋಧಿಗಳ ಯತ್ನ ಈವರೆಗೂ ಫಲ ಕೊಟ್ಟಿಲ್ಲ. ಈ ಬಾರಿಯೂ ಪ್ರಯತ್ನ ಮುಂದುವರಿದಿದೆ.

ಭಾಲ್ಕಿ ಕ್ಷೇತ್ರದಲ್ಲಿ ಲಿಂಗಾಯತ, ಮರಾಠಾ, ಎಸ್‌ಸಿ ಮತಗಳೇ ನಿರ್ಣಾಯಕ. ಕಬ್ಬಲಿಗ, ಕುರುಬ ಸೇರಿ ಅನ್ಯ ಸಮುದಾಯದವರೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

► ಗೆಲುವಿನ ಸರದಾರ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಈ ಕ್ಷೇತ್ರದ ಹಾಲಿ ಶಾಸಕ. ಸತತವಾಗಿ 2008, 2013, 2018ರಲ್ಲಿ ಗೆದ್ದು ಹ್ಯಾಟ್ರಿಕ್ ದಾಖಲೆ ಬರೆದಿರುವವರು. ಈಗ 4ನೇ ಬಾರಿ ಗೆಲ್ಲುವ ತಯಾರಿ ಯಲ್ಲಿದ್ದಾರೆ. ಮತ್ತು ಗೆಲ್ಲುವ ವಿಶ್ವಾಸವನ್ನೂ ಅವರು ಹೊಂದಿದ್ದಾರೆ.

ಭಾಲ್ಕಿಯಲ್ಲಿ ಮಾತ್ರವೇ ಅಲ್ಲ, ರಾಜ್ಯಾದ್ಯಂತ ಬಿಜೆಪಿ ಧೂಳೀಪಟವಾಗಲಿದೆ ಎಂಬ ವಿಶ್ವಾಸ ಈಶ್ವರ್ ಖಂಡ್ರೆಯವರದು. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಕಾರಣ ಬಿಜೆಪಿಯವರು ಏನೇ ತಂತ್ರದಲ್ಲಿ ತೊಡಗಿದ್ದರೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಖಂಡ್ರೆ ನಿರತರಾಗಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದು ದಾಖಲೆ ಬರೆದಿದೆ ಯೆಂಬುದು ಗಮನಾರ್ಹ. ಭಾಲ್ಕಿ ಕ್ಷೇತ್ರದಲ್ಲಿ ಇಷ್ಟು ವರ್ಷ ಗಳಲ್ಲಿ ತಾವು ಮಾಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ತಮ್ಮ ಕೈಹಿಡಿಯಲಿವೆ ಎಂಬ ಭರವಸೆ ಖಂಡ್ರೆಯವರಿಗಿದೆ.

► ಬಿಜೆಪಿ ರಣತಂತ್ರ

ಕಾಂಗ್ರೆಸ್ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡಲು ಬಿಜೆಪಿ ಈ ಬಾರಿ ಗಂಭೀರವಾಗಿ ರಣತಂತ್ರ ರೂಪಿಸುವುದರಲ್ಲಿ ನಿರತವಾಗಿದೆ. ಆದರೆ ಈಶ್ವರ್ ಖಂಡ್ರೆ ವಿರುದ್ಧ ಗೆಲ್ಲುವುದು ದೊಡ್ಡ ಸವಾಲು ಎಂಬುದಂತೂ ನಿಜ. ಸದ್ಯ ಬಿಜೆಪಿ ಅಭ್ಯರ್ಥಿ ಯಾರು ಎಂಬುದೂ ಸ್ಪಷ್ಟವಿಲ್ಲ. 2013ರಲ್ಲಿ ಕೆಜೆಪಿ, 2018ರಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿ ಸೋಲುಂಡಿರುವ ಡಿ.ಕೆ. ಸಿದ್ರಾಮ್ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಅಲ್ಲದೆ, ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಕೂಡ ಬಿಜೆಪಿಯ ಟಿಕೆಟ್ ಬಯಸಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತಿರುವವರು ಈ ಪ್ರಕಾಶ್ ಖಂಡ್ರೆ. ಆದರೂ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ.

► ಬಂಡಾಯವೇ ದೌರ್ಬಲ್ಯ

ಪ್ರತೀ ಬಾರಿಯೂ ಪಕ್ಷದಲ್ಲಿ ತಲೆದೋರುವ ಬಂಡಾಯವೇ ಸೋಲಿಗೆ ಕಾರಣವೆಂಬುದನ್ನು ಗಮನಿಸಿರುವ ಬಿಜೆಪಿ ಈ ಬಾರಿ ಬಂಡಾಯ ಇಲ್ಲದಂತಾಗಲು ಯತ್ನಿಸುತ್ತಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಗೆಲ್ಲಲೇಬೇಕೆಂದಿ ರುವ ಬಿಜೆಪಿ, ಟಿಕೆಟ್ ಆಕಾಂಕ್ಷಿಗಳ ಕಡೆಯಿಂದ ಆಣೆ ಪ್ರಮಾಣ ಮಾಡಿಸಿರುವ ವಿಚಾರವೂ ವರದಿಯಾಗಿದೆ. ಈಶ್ವರ ಖಂಡ್ರೆಯವರನ್ನು ಸೋಲಿಸುವುದಕ್ಕೆ ತಯಾರಿಯ ಮೊದಲ ಹಂತವಾಗಿ, ಟಿಕೆಟ್ ಘೋಷಣೆಗೂ ಮೊದಲೇ ಆಕಾಂಕ್ಷಿಗಳ ನ್ನೆಲ್ಲ ಒಂದುಗೂಡಿಸುವ ಕಸರತ್ತಿಗೆ ಬಿಜೆಪಿ ಮುಂದಾಗಿದೆ.

ಪಕ್ಷವು ಯಾರಿಗೇ ಟಿಕೆಟ್ ನೀಡಿದರೂ, ಅವರನ್ನು ಎಲ್ಲರೂ ಸೇರಿ ಪರಸ್ಪರ ಸಹಕಾರ ನೀಡಿ ಗೆಲ್ಲಿಸುವುದಾಗಿ ಕೇಂದ್ರ ಸಚಿವ ಭಗವಂತ ಖೂಬಾ ಸಮ್ಮುಖದಲ್ಲಿ ಆಣೆ ಪ್ರಮಾಣ ಮಾಡಿಸಲಾಗಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಲಿಂಗಾ ಯತ ಸಮಾಜದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಡಿ.ಕೆ. ಸಿದ್ರಾಮ್, ಮರಾಠಾ ಸಮಾಜದ ದಿನಕರ ಮೋರೆ, ಜನಾದರ್ನ ಬಿರಾದಾರ್ ತಮಗ್ಯಾಳ್ ಆಣೆ ಪ್ರಮಾಣ ಮಾಡಿರುವುದು ವರದಿಯಾಗಿದೆ.

► ಸಿದ್ರಾಮ್, ಪ್ರಕಾಶ್ ಒಗ್ಗಟ್ಟು?

ಕಳೆದ ಬಾರಿ ಪ್ರಕಾಶ್ ಖಂಡ್ರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರಿಂದ ಬಿಜೆಪಿ ಅಭ್ಯರ್ಥಿ ಡಿ.ಕೆ. ಸಿದ್ರಾಮ್ ಸೋಲುವಂತಾಯಿತು ಎಂಬ ಮಾತುಗಳಿವೆ. ಆದರೆ ಈ ಬಾರಿ ಈಶ್ವರ್ ಖಂಡ್ರೆ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಕಟ್ಟಾ ರಾಜಕೀಯ ವಿರೋಧಿಗಳಾದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಹಾಗೂ ಡಿ.ಕೆ. ಸಿದ್ರಾಮ್ ಒಂದಾಗಿದ್ದಾರೆ ಎನ್ನಲಾಗಿದೆ.

ಪ್ರಕಾಶ್ ಖಂಡ್ರೆ ಹಾಗೂ ಡಿ.ಕೆ. ಸಿದ್ರಾಮ್ ಕ್ಷೇತ್ರದಲ್ಲಿ ಉತ್ತಮ ನೆಟ್‌ವರ್ಕ್ ಹೊಂದಿದವರಾಗಿದ್ದಾರೆ. ಪ್ರಕಾಶ್ ಖಂಡ್ರೆ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರು. ಹಾಗೆಯೇ ಡಿ.ಕೆ. ಸಿದ್ರಾಮ್ ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷರು. ಕಳೆದ ಬಾರಿ ಮಾಡಿರುವ ತಪ್ಪು ಈ ಬಾರಿ ಆಗಕೂಡದು ಎಂದು ಇಬ್ಬರೂ ಒಟ್ಟಾಗಿ ಸಾಗುವ ಮನಸ್ಸು ಮಾಡಿದ್ದಾರೆ. ಈಗಾಗಲೇ ಆಣೆ ಪ್ರಮಾಣ ಮಾಡಿರುವಂತೆ, ಯಾರಿಗೇ ಟಿಕೆಟ್ ಸಿಕ್ಕರೂ ಒಂದಾಗಿ ಹೋರಾಡಿ ಕಾಂಗ್ರೆಸನ್ನು ಸೋಲಿಸಲು ಪಣ ತೊಟ್ಟಿ ದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ರಕಾಶ್ ಖಂಡ್ರೆ ಪುತ್ರ ಪ್ರಸನ್ನ ಖಂಡ್ರೆ ಕೂಡ ಕ್ಷೇತ್ರದಲ್ಲಿ ಉಮಾದೇವಿ ಫೌಂಡೇಶನ್ ಮೂಲಕ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.

► ಜೆಡಿಎಸ್‌ಗೆ ನೆಲೆಯಿರದ ಕ್ಷೇತ್ರ

ಇನ್ನು, ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ಅಂಥ ನೆಲೆಯೇನೂ ಇಲ್ಲ. ಕಳೆದ ಬಾರಿಯೇನೋ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಜೆಡಿಎಸ್‌ನಿಂದ ಪ್ರಕಾಶ್ ಖಂಡ್ರೆ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ದಳದ ಅಭ್ಯರ್ಥಿಯಾಗಲು ಇದುವರೆಗೂ ಯಾರೂ ಮುಂದೆ ಬಂದಿಲ್ಲ ಎನ್ನಲಾಗಿದೆ. ಹಾಗಾಗಿ ಜೆಡಿಎಸ್ ಇಲ್ಲಿ ಕಣಕ್ಕಿಳಿಯುವುದು ಅನುಮಾನ. ಕಣಕ್ಕಿಳಿದರೂ ಅದು ಹೇಳಿ ಕೊಳ್ಳುವಂಥ ಪೈಪೋಟಿಯನ್ನೇನೂ ಕೊಡಲಾರದು. ಹಾಗಾಗಿ ಅಖಾಡದಲ್ಲಿ ಆಟವೇನಿದ್ದರೂ ಕಾಂಗ್ರೆಸ್, ಬಿಜೆಪಿ ಮಧ್ಯೆ ಮಾತ್ರ. ಕಾಂಗ್ರೆಸ್ ಬಲ, ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿಯಲು ಕಮಲ ಪಾಳಯದ ಕಸರತ್ತು ಇವೆರಡರ ನಡುವೆ ಈ ಬಾರಿ ಗೆಲುವು ಯಾರಿಗೆ ಎಂಬುದು ನಿಜವಾಗಿಯೂ ಕುತೂಹಲ ಕೆರಳಿಸಿದೆ.

share
ಆರ್.ಕೆ.
ಆರ್.ಕೆ.
Next Story
X