Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇಪಿಎಫ್ಒ ಚಂದಾದಾರರು ಅದಾನಿಯ ಎರಡು...

ಇಪಿಎಫ್ಒ ಚಂದಾದಾರರು ಅದಾನಿಯ ಎರಡು ಶೇರುಗಳಲ್ಲಿ ‘ಬಂಧಿತ ’ಹೂಡಿಕೆದಾರರು: ವರದಿ

27 March 2023 4:01 PM IST
share
ಇಪಿಎಫ್ಒ ಚಂದಾದಾರರು ಅದಾನಿಯ ಎರಡು ಶೇರುಗಳಲ್ಲಿ ‘ಬಂಧಿತ ’ಹೂಡಿಕೆದಾರರು: ವರದಿ

ಹೊಸದಿಲ್ಲಿ: ಹಿಂಡೆನ್ಬರ್ಗ್ ವರದಿಯ ನಂತರದ ಬೆಳವಣಿಗೆಗಳು ಹಲವಾರು ದೊಡ್ಡ ಹೂಡಿಕೆದಾರರು ಅದಾನಿ ಗ್ರೂಪ್ ಶೇರುಗಳಲ್ಲಿ ತಮ್ಮ ಹೂಡಿಕೆಯನ್ನು ಪುನರ್ಪರಿಶೀಲಿಸುವಂತೆ ಮಾಡಿರಬಹುದು. ಆದರೆ ಭಾರತದ ಅತ್ಯಂತ ದೊಡ್ಡ ನಿವೃತ್ತಿ ನಿಧಿಯಾಗಿರುವ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯು ಅದಾನಿ ಎಂಟರ್ಪ್ರೈಸ್ಸ್ ಸೇರಿದಂತೆ ಅದಾನಿ ಗ್ರೂಪ್ನ ಎರಡು ಕಂಪನಿಗಳ ಶೇರುಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ. ಮುಂದಿನ ವಾರ ಸಭೆ ಸೇರಲಿರುವ ಇಪಿಎಫ್ಒ ಟ್ರಸ್ಟಿಗಳು ತಮ್ಮ ಹೂಡಿಕೆ ವಿಧಾನವನ್ನು ಮರುಪರಿಶೀಲಿಸದಿದ್ದರೆ ಕನಿಷ್ಠ ಈ ವರ್ಷದ ಸೆಪ್ಟಂಬರ್ವರೆಗೆ ಸಂಸ್ಥೆಯು ಅದನ್ನು ಮುಂದುವರಿಸಲಿದೆ.

ಔಪಚಾರಿಕ ವಲಯದ 27.73 ಕೋ.ಉದ್ಯೋಗಿಗಳ ವೃದ್ಧಾಪ್ಯ ಉಳಿತಾಯವನ್ನು ನಿರ್ವಹಿಸುವ ಇಪಿಎಫ್ಒ ತನ್ನ ನಿಧಿಯ ಶೇ.15ರಷ್ಟನ್ನು ಎನ್ಎಸ್ಇ ನಿಫ್ಟಿ 50 ಮತ್ತು ಬಿಎಸ್ಇ ಸೆನ್ಸೆಕ್ಸ್ ಜೊತೆ ಜೋಡಣೆಗೊಂಡಿರುವ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್)ಗಳಲ್ಲಿ ಹೂಡಿಕೆ ಮಾಡುತ್ತದೆ.

ಎಲ್ಐಸಿಯ ನಂತರ ದೇಶದ ಎರಡನೇ ಅತಿದೊಡ್ಡ ಬ್ಯಾಂಕೇತರ ಸಂಸ್ಥೆಯಾಗಿರುವ ಇಪಿಎಫ್ಒ ತನ್ನ ಈಕ್ವಿಟಿ ಹೂಡಿಕೆಗಳ ಶೇ.85ರಷ್ಟು ಮೊತ್ತವನ್ನು ನಿಫ್ಟಿ 50 ಜೊತೆ ಜೊಡಣೆಗೊಂಡಿರುವ ಇಟಿಎಫ್ಗಳಲ್ಲಿ ತೊಡಗಿಸುತ್ತದೆ. ಅದಾನಿ ಎಂಟರ್ಪ್ರೈಸಸ್ ಕಳೆದ ಸೆಪ್ಟಂಬರ್ನಲ್ಲಿ ನಿಫ್ಟಿ 50 ಶೇರುಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು,ಈ ವರ್ಷದ ಸೆಪ್ಟೆಂಬರ್ವರೆಗೆ ನಿಫ್ಟಿ 50ರಲ್ಲಿ ಮುಂದುವರಿಯಲಿದೆ. ಅದಾನಿ ಪೋರ್ಟ್ಸ್ ಆ್ಯಂಡ್ ಸೆಝ್ ಸೆಪ್ಟಂಬರ್ 2015ರಿಂದಲೂ ನಿಫ್ಟಿ 50ರ ಭಾಗವಾಗಿದ್ದು,ಈ ವರ್ಷದ ಸೆಪ್ಟಂಬರ್ವರೆಗೆ ಹಾಗೆಯೇ ಮುಂದುವರಿಯಲಿದೆ.

ಇಪಿಎಫ್ಒ ಚಂದಾದಾರರ ಉಳಿತಾಯ ಅಪಾಯದಲ್ಲಿ
ಕೇಂದ್ರ ಭವಿಷ್ಯನಿಧಿ ಆಯುಕ್ತೆ ನೀಲಂ ಶಮಿ ರಾವ್ ಅವರು ಅದಾನಿ ಗ್ರೂಪ್ ಶೇರುಗಳಲ್ಲಿ ಇಫಿಎಫ್ಒ ಹೂಡಿಕೆಗಳ ಕುರಿತು ಸುದ್ದಿಸಂಸ್ಥೆಯು ಕಳುಹಿಸಿದ್ದ ಪ್ರಶ್ನಾವಳಿಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಜನರ ವೃದ್ಧಾಪ್ಯ ಉಳಿತಾಯದ ಸುರಕ್ಷತೆಗಾಗಿ ಅದಾನಿ ಗ್ರೂಪ್ ಶೇರುಗಳಲ್ಲಿ ಹೊಸದಾಗಿ ಹೂಡಿಕೆ ಮಾಡದಂತೆ ಸಂಸ್ಥೆಯು ತನ್ನ ಫಂಡ್ ಮ್ಯಾನೇಜರ್ಗಳಿಗೆ ಸೂಚಿಸಿದೆಯೇ ಮತ್ತು ನಿಫ್ಟಿ 50 ಜೊತೆ ಜೋಡಣೆಗೊಂಡಿರುವ ಹೂಡಿಕೆಗಳನ್ನು ಹಿಂದೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆದಿದೆಯೇ ಎಂಬ ಪ್ರಶ್ನೆಗಳು ಇವುಗಳಲ್ಲಿ ಸೇರಿದ್ದವು.

ಮಾರ್ಚ್ 2022ಕ್ಕೆ ಇದ್ದಂತೆ ಇಟಿಎಫ್ಗಳಲ್ಲಿ 1.57 ಲ.ಕೋ.ರೂ.ಗಳನ್ನು ಹೂಡಿಕೆ ಮಾಡಿರುವ ಇಪಿಎಫ್ಒ 2022-23ರಲ್ಲಿ 38,000 ಕೋ.ರೂ.ಗಳನ್ನು ಹೂಡಿಕೆ ಮಾಡಿದೆ.

ಟ್ರಸ್ಟಿಗಳಿಗೆ ಅರಿವಿಲ್ಲ
ಸಂಸ್ಥೆಯು ಅದಾನಿ ಗ್ರೂಪ್ ಶೇರುಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ತಿಳಿಸಿರುವ ಸುದ್ದಿಸಂಸ್ಥೆಯು ಸಂಪರ್ಕಿಸಿದ್ದ ಇಪಿಎಫ್ಒ ಟ್ರಸ್ಟಿಗಳು,ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ ಅಧ್ಯಕ್ಷತೆಯಲ್ಲಿ ನಡೆಯುವ ಮಂಡಳಿಯ ಸಭೆಯಲ್ಲಿ ಈ ವಿಷಯವು ಪ್ರಸ್ತಾವಗೊಳ್ಳಬಹುದು ಎಂದು ಹೇಳಿದ್ದಾರೆ. ಎರಡು ದಿನಗಳ ಮಂಡಳಿ ಸಭೆಯು ಸೋಮವಾರ ಆರಂಭಗೊಂಡಿದೆ.
ಟ್ರಸ್ಟಿಗಳ ಸಭೆಯಲ್ಲಿ ಇಪಿಎಫ್ಒದ ಈ ವರ್ಷದ ಹೂಡಿಕೆ ಆದಾಯ ಮತ್ತು ಚಂದಾದಾರರಿಗೆ ನೀಡಬೇಕಿರುವ ಬಡ್ಡಿದರದ ಬಗ್ಗೆ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಕಳೆದ ವರ್ಷ ಇಪಿಎಫ್ ಬಡ್ಡಿದರವನ್ನು 45 ವರ್ಷಗಳಲ್ಲಿಯೇ ಕನಿಷ್ಠವಾದ ಶೇ.8.1ಕ್ಕೆ ತಗ್ಗಿಸಲಾಗಿತ್ತು.

ಹೂಡಿಕೆ ಮೇಲಿನ ಲಾಭಕ್ಕೆ ಹೊಡೆತ
ಕಳೆದ ಆರು ತಿಂಗಳುಗಳಿಂದ ಮಾತ್ರ ಇಪಿಎಫ್ಒ ಅದಾನಿ ಗ್ರೂಪ್ನ ಮುಂಚೂಣಿ ಕಂಪನಿ ಅದಾನಿ ಎಂಟರ್ಪ್ರೈಸಸ್ನಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಈ ಮೊತ್ತವು ಈ ಎಲ್ಲ ವರ್ಷಗಳಲ್ಲಿ ಅದು ಅದಾನಿ ಪೋರ್ಟ್ಸ್ ಶೇರುಗಳಲ್ಲಿ ಮಾಡಿರುವ ಸಂಚಿತ ಹೂಡಿಕೆಗಿಂತ ತುಂಬ ಕಡಿಮೆಯಾಗಿದೆ ಎಂದು ಸರಕಾರದ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಇಪಿಎಫ್ಒ ಸೆಪ್ಟಂಬರ್ 2016ರಲ್ಲಿ ತನ್ನ ಈಕ್ವಿಟಿ ಹೂಡಿಕೆಯನ್ನು ಚಂದಾದಾರರಿಂದ ಸಂಗ್ರಹಿತ ವಂತಿಗೆಗಳ ಶೇ.10ಕ್ಕೆ ಹೆಚ್ಚಿಸಿತ್ತು ಮತ್ತು ಮೇ 2017ರಲ್ಲಿ ಅದನ್ನು ಶೇ.15ಕ್ಕೆ ಹೆಚ್ಚಿಸಿತ್ತು. ಆದರೆ ಜ.24ರಿಂದ ಅದಾನಿ ಶೇರುಗಳ ಬೆಲೆಗಳಲ್ಲಿ ತೀವ್ರ ಕುಸಿತವನ್ನು ಗಮನಿಸಿದರೆ ಇಪಿಎಫ್ಒದ ಅದಾನಿ ಹೂಡಿಕೆಗಳು ಅದರ ಹೂಡಿಕೆಗಳ ಮೇಲಿನ ಲಾಭವನ್ನು ಕಡಿಮೆ ಮಾಡುತ್ತವೆ ಮತ್ತು ಇದು ಸಂಸ್ಥೆಯು ತನ್ನ ಚಂದಾದಾರರಿಗೆ ನೀಡುವ ವಾರ್ಷಿಕ ಬಡ್ಡಿದರದ ಮೇಲೆ ಪರಿಣಾಮವನ್ನು ಬೀರಬಹುದು.

share
Next Story
X