‘ಸಿಟಿ’ ರವಿಗೂ ‘ಓಟಿ’ ಮದ್ಯಕ್ಕೂ ಯಾವ ಜನ್ಮದ ಮೈತ್ರಿ: ಕಾಂಗ್ರೆಸ್ ಲೇವಡಿ
ಬೆಂಗಳೂರು, ಮಾ. 27: ‘ಸಿ.ಟಿ. ರವಿಗೂ ‘ಓಟಿ’ ಮದ್ಯಕ್ಕೂ ಯಾವ ಜನ್ಮದ ಮೈತ್ರಿ!? ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು. ಹೆಂಡ ಹಂಚುವ ಕಾರ್ಯಸೂಚಿ ಆರೆಸೆಸ್ಸ್ ಕಚೇರಿಯಿಂದ ಬಂದಿದ್ದೇ ಸಿ.ಟಿ.ರವಿ?, ಹೆಂಡ ಪೂರೈಕೆ ಮಾಡಲೆಂದೇ ವಾರಕ್ಕೊಮ್ಮೆ ಮೋದಿ, ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆಯೇ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರವಿ ಬೆಂಬಲಿಗರ ಕಾರು ಅಪಘಾತವಾಗುತ್ತದೆ. ಅದರೊಳಗೆ ಮದ್ಯದ ರಾಶಿ, ಜೊತೆಗೊಂದು ಮಾರಕಾಸ್ತ್ರ ಇರುತ್ತದೆ. ಈ ‘ಸಿಟಿ’ ರವಿಗೂ, ಕಾರು ಅಪಘಾತಕ್ಕೂ, ‘ಓಟಿ’ ಮದ್ಯಕ್ಕೂ ಏನು ಈ ಜನ್ಮಾಂತರದ ಸಂಬಂಧ! ಧರ್ಮ, ಸಂಸ್ಕೃತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆ!’ ಎಂದು ಟೀಕಿಸಿದೆ.
‘ಶಾಸಕರಿಗೆ ‘ಬಾಂಬೆ ಮಿಠಾಯಿ’ ಆಮಿಷ ತೋರಿಸಿ ಆಪರೇಷನ್ ಮಾಡುವ ಬಿಜೆಪಿ ಮತದಾರರಿಗೆ ಹೆಂಡ ತೋರಿಸಿ ಮತ ಪಡೆಯಲು ಮುಂದಾಗಿದೆ. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಸಂಬಂಧಿಸಿದ ಕಾರಿನಲ್ಲಿ ‘ಓಟಿ ಮದ್ಯ’ ಹಾಗೂ ಲಾಂಗ್ ಪತ್ತೆಯಾಗಿದೆ. ಹೆಂಡ ಕುಡಿಸಿ, ಬೆದರಿಸಿ ಮತ ಪಡೆಯುವ ಜವಾಬ್ದಾರಿಯನ್ನು ರೌಡಿ ಮೋರ್ಚಾಗೆ ವಹಿಸಲಾಗಿದೆಯೇ?’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಇದನ್ನೂ ಓದಿ: ಚಿಕ್ಕಮಗಳೂರು | ಅಪಘಾತಕ್ಕೀಡಾದ ಕಾರಿನಲ್ಲಿ ಮಾರಕಾಸ್ತ್ರ, ಮದ್ಯ, ಸಿ.ಟಿ.ಭಾವಚಿತ್ರದ ಕ್ಯಾಲೆಂಡರ್ ಪತ್ತೆ
"ಸಿಟಿ" ರವಿಗೂ
— Karnataka Congress (@INCKarnataka) March 27, 2023
"ಓಟಿ" ಮದ್ಯಕ್ಕೂ
ಯಾವ ಜನ್ಮದ ಮೈತ್ರಿ!?
ಮತದಾರರಿಗೆ ಸಾಧನೆ ತೋರಿಸಿ ಮತ ಕೇಳಲಾಗದ ಬಿಜೆಪಿ ಹೆಂಡದ ಮೊರೆ ಹೋಗಿರುವುದು ನಾಚಿಕೆಗೇಡು.
ಹೆಂಡ ಹಂಚುವ ಕಾರ್ಯಸೂಚಿ RSS ಕಚೇರಿಯಿಂದ ಬಂದಿದ್ದೇ @CTRavi_BJP?
ಹೆಂಡ ಪೂರೈಕೆ ಮಾಡಲೆಂದೇ ವಾರಕ್ಕೊಮ್ಮೆ ಮೋದಿ, ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆಯೇ @BJP4Karnataka? pic.twitter.com/3zoweFJUEx