Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಧಾರ್-ಪಾನ್ ಜೋಡಣೆ ಶುಲ್ಕ ಪಾವತಿ ಹೇಗೆ?

ಆಧಾರ್-ಪಾನ್ ಜೋಡಣೆ ಶುಲ್ಕ ಪಾವತಿ ಹೇಗೆ?

27 March 2023 6:13 PM IST
share
ಆಧಾರ್-ಪಾನ್ ಜೋಡಣೆ ಶುಲ್ಕ ಪಾವತಿ ಹೇಗೆ?

ಹೊಸದಿಲ್ಲಿ: ತೆರಿಗೆದಾರರು ತಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆಯನ್ನು ಮಾ.31ರೊಳಗೆ ಮಾಡುವುದನ್ನು ಆದಾಯ ತೆರಿಗೆ ಇಲಾಖೆಯು ಕಡ್ಡಾಯಗೊಳಿಸಿದೆ. 2022, ಮಾ.31ಕ್ಕೆ ಮೊದಲು ಆಧಾರ್-ಪಾನ್ ಜೋಡಣೆ ಉಚಿತವಾಗಿತ್ತು. 2022, ಎಪ್ರಿಲ್ 1ರಿಂದ 500 ರೂ.ಶುಲ್ಕವನ್ನು ವಿಧಿಸಲಾಗಿದ್ದು,ಬಳಿಕ 2022,ಜು.1ರಿಂದ ಶುಲ್ಕವನ್ನು 1,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯು ಆಧಾರ್-ಪಾನ್ ಜೋಡಣೆ ಶುಲ್ಕವನ್ನು ಪಾವತಿಸಲು ತೆರಿಗೆದಾರರಿಗೆ ಇ-ಪೇ ಕಾರ್ಯವಿಧಾನವನ್ನು ಒದಗಿಸಿದೆ. ಅದು ಇ-ಪೇ ತೆರಿಗೆಗಾಗಿ ಹಲವಾರು ಬ್ಯಾಂಕುಗಳಿಗೂ ಅಧಿಕಾರ ನೀಡಿದೆ. ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಟಿ ಯೂನಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಜಮ್ಮು ಆ್ಯಂಡ್ ಕಾಶ್ಮೀರ ಬ್ಯಾಂಕ್, ಕರೂರ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವುಗಳಲ್ಲಿ ಸೇರಿವೆ.

ತೆರಿಗೆದಾರರು ಈ ಯಾವುದೇ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಈ ಕೆಳಗಿನ ವಿಧಾನವನ್ನು ಅನುಸರಿಸಬೇಕಾಗುತ್ತದೆ:

ಆದಾಯ ತೆರಿಗೆ ವೆಬ್ಸೈಟ್ ನ ಇ-ಫೈಲಿಂಗ್ ಹೋಮ್ ಪೇಜ್ಗೆ ಭೇಟಿ ನೀಡಿ ಮತ್ತು ಕ್ವಿಕ್ ಲಿಂಕ್ಸ್ ವಿಭಾಗದಲ್ಲಿ ಲಿಂಕ್ ಆಧಾರ್ ಅನ್ನು ಕ್ಲಿಕ್ಕಿಸಿ. ಪರ್ಯಾಯವಾಗಿ ಇ-ಫೈಲಿಂಗ್ ಪೋರ್ಟಲ್ ಗೆ ಲಾಗಿನ್ ಆಗಿ ಪ್ರೊಫೈಲ್ ವಿಭಾಗದಲ್ಲಿ ಲಿಂಕ್ ಆಧಾರ್ ಅನ್ನು ಕ್ಲಿಕ್ಕಿಸಬಹುದು.

ತೆರಿಗೆದಾರರು ತಮ್ಮ ಪಾನ್ ಸಂಖ್ಯೆಯನ್ನು ನಮೂದಿಸಿ ಅದನ್ನು ದೃಢಪಡಿಸಬೇಕಾಗುತ್ತದೆ ಮತ್ತು ಒಟಿಪಿಗಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ಒಟಿಪಿ ದೃಢೀಕರಣದ ಬಳಿಕ ತೆರಿಗೆದಾರರನ್ನು ಇ-ಪೇ ಟ್ಯಾಕ್ಸ್ ಪೇಜ್ ಗೆ ಮರುನಿರ್ದೇಶಿಸಲಾಗುತ್ತದೆ.

ಪ್ರೊಸೀಡ್ ಅನ್ನು ಕ್ಲಿಕ್ ಮಾಡಿ ಎವೈ 2023-24ನ್ನು ಹಾಗೂ ಪಾವತಿ ವಿಧಾನವನ್ನು ಇತರ ಸ್ವೀಕೃತಿಗಳು (500) ಎಂದು ಆಯ್ಕೆ ಮಾಡಿಕೊಳ್ಳಿ,ಕಂಟಿನ್ಯೂ ಅನ್ನು ಕ್ಲಿಕ್ ಮಾಡಿ.
ಈಗ ಒಂದು ಚಲನ್ ಸೃಷ್ಟಿಯಾಗುತ್ತದೆ. ಮುಂದಿನ ಸ್ಕ್ರೀನ್ನಲ್ಲಿ ತೆರಿಗೆದಾರರು ಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಅವರನ್ನು ಪಾವತಿಯನ್ನು ಮಾಡಲು ಬ್ಯಾಂಕ್ ವೆಬ್ಸೈಟ್ಗೆ ಮರುನಿರ್ದೇಶಿಸಲಾಗುತ್ತದೆ.

ಇ-ಪೇ ಟ್ಯಾಕ್ಸ್ ಮೂಲಕ ಪಾವತಿಗಾಗಿ ಪಟ್ಟಿ ಮಾಡಿರದ ಇತರ ಬ್ಯಾಂಕುಗಳ ಗ್ರಾಹಕರಿಗಾಗಿ ಪ್ರತ್ಯೇಕ ಹಂತಗಳನ್ನು ವೆಬ್ಸೈಟ್ನಲ್ಲಿ ನಮೂದಿಸಲಾಗಿದೆ:
ಇ-ಫೈಲಿಂಗ್ ವೆಬ್ಸೈಟ್ಗೆ ಭೇಟಿ ನೀಡಿ. 

‘ಕ್ಲಿಕ್ ಹಿಯರ್ ಟು ಗೋ ಟು ಎನ್ಎಸ್ಡಿಎಲ್....’ ಹೈಪರ್ಲಿಂಕ್ನ್ನು ಕ್ಲಿಕ್ಕಿಸಿ. ತೆರೆದುಕೊಳ್ಳುವ ಹೊಸಪುಟದಲ್ಲಿ ಪ್ರೊಸೀಡ್ ಅಂಡರ್ ಚಲನ್ ನಂ/ಐಟಿಎನ್ಎಸ್ 280 ಅನ್ನು ಕ್ಲಿಕ್ಕಿಸಿ.

ಟ್ಯಾಕ್ಸ್ ಅಪ್ಲಿಕೇಬಲ್ (ಮೇಜರ್ ಹೆಡ್)ನಡಿ (0021) ಇನಕಂ ಟ್ಯಾಕ್ಸ್ (ಅದರ್ ದ್ಯಾನ್ ಕಂಪನೀಸ್) ಆಯ್ಕೆ ಮಾಡಿ.

ಟೈಪ್ ಆಫ್ ಪೇಮೆಂಟ್ (ಮೈನರ್ ಹೆಡ್)ನಡಿ  (500)ಇತರ ಸ್ವೀಕೃತಿಗಳನ್ನು ಆಯ್ಕೆ ಮಾಡಿ.

ತೆರಿಗೆ ಮೌಲ್ಯಮಾಪನ ವರ್ಷವನ್ನು 2023-24 ಎಂದು ಆಯ್ಕೆ ಮಾಡಿ ಮತ್ತು ಇತರ ಕಡ್ಡಾಯ ವಿವರಗಳನ್ನು ಒದಗಿಸಿ ಮುಂದುವರಿಯಿರಿ.

ತೆರಿಗೆದಾರರು ತಮ್ಮ ಪಾನ್ ಮತ್ತು ಆಧಾರ್ನ್ನು ಜೋಡಣೆಗೊಳಿಸದಿದ್ದರೆ ಅವರ ಪಾನ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸುವಾಗ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

share
Next Story
X