ಬೆಳುವಾಯಿ: ಹೆದ್ದಾರಿ ಕಾಮಗಾರಿ ವೇಳೆ ಯಂತ್ರ ಢಿಕ್ಕಿ; ಕಾರ್ಮಿಕ ಸ್ಥಳದಲ್ಲೇ ಮೃತ್ಯು
ಬೆಳುವಾಯಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ವೇಳೆ ರಸ್ತೆ ಸಮತಟ್ಟುಗೊಳಿಸುವ ಯಂತ್ರ ಕೂಲಿ ಕಾರ್ಮಿಕನಿಗೆ ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಮೃತ ವ್ಯಕ್ತಿಯನ್ನು ಮಧ್ಯಪ್ರದೇಶದ ವಿವೇಕ್ (35) ಎಂದು ಗುರುತಿಸಲಾಗಿದೆ.
ಮೂಡುಬಿದಿರೆ-ಕಾರ್ಕಳ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಸೋಮವಾರ ರಸ್ತೆ ಸಮತಟ್ಟುಗೊಳಿಸುವ ಯಂತ್ರ ಹಿಮ್ಮುಖವಾಗಿ ಚಲಿಸುವಾಗ ಹಿಂಬದಿಯಲ್ಲಿ ನಿಂತಿದ್ದ ಕಾರ್ಮಿಕನನ್ನು ಗಮನಿಸದೆ ಆತನ ಮೇಲೆಯೆ ಯಂತ್ರ ಹರಿದು ಕಾರ್ಮಿಕ ಮೃತಪಟ್ಟರೆನ್ನಲಾಗಿದೆ. ಯಂತ್ರದ ಚಾಲಕ ಮಧ್ಯಪ್ರದೇಶದ ರಾಹುಲ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story