ಮಾ.28: ಮಲ್ಲಿಗೆ ಕೃಷಿ, ನಾಟಿಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ಶಿಬಿರ
ಉಡುಪಿ: ರೋಟರಿ ಕ್ಲಬ್ ಮಣಿಪುರ ಮತ್ತು ಉಡುಪಿ ಜಿಲ್ಲಾ ಕೃಷಿಕ ಸಂಘದ ಸಹಯೋಗದಲ್ಲಿ ಮಲ್ಲಿಗೆ ಕೃಷಿ ಮತ್ತು ನಾಟಿಕೋಳಿ ಸಾಕಾಣಿಕೆ ಮಾಹಿತಿ ಕಾರ್ಯಕ್ರಮ ಮಾ.28ರ ಬೆಳಿಗ್ಗೆ 10.30ಕ್ಕೆ ದೆಂದೂರುಕಟ್ಟೆ ಜೋಸೆಫ್ ಕುಂದರ್ ಮನೆ ವಠಾರದಲ್ಲಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರ.ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಮತ್ತು ಪ್ರಗತಿಪರ ಕೃಷಿಕ ಜೋಸೆಫ್ ಕುಂದರ್ ಭಾಗವಹಿಸಲಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ಮಲ್ಲಿಗೆ ಕೃಷಿ ಮಾಡುವ ವೈಜ್ಞಾನಿಕ ಕ್ರಮಗಳು, ಕೀಟ-ರೋಗ ನಿರ್ವಹಣೆ, ನಾಟಿ ಕೋಳಿಗಳ ಆಯ್ಕೆ, ಸಾಕಾಣಿಕಾ ವಿಧಾನಗಳ ಸಮಗ್ರ ಮಾಹಿತಿ ನೀಡುವ ಈ ಕಾರ್ಯಕ್ರಮದಲ್ಲಿ ಕೃಷಿಕರು, ಆಸಕ್ತರು ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
Next Story