2022-23ರ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ 8.15ಕ್ಕೆ ನಿಗದಿ: ವರದಿ
ಹೊಸದಿಲ್ಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಇಂದು ತನ್ನ ಸಭೆಯಲ್ಲಿ 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 8.15ಕ್ಕೆ ನಿಗದಿಪಡಿಸಿದೆ.
ಮಾರ್ಚ್ 2022 ರಲ್ಲಿ EPFO ತನ್ನ ಸುಮಾರು ಐದು ಕೋಟಿ ಚಂದಾದಾರರಿಗೆ ಇಪಿಎಫ್ ಮೇಲಿನ ಬಡ್ಡಿ ದರವನ್ನು 2020-21 ರಲ್ಲಿದ್ದ ಶೇಕಡಾ 8.5 ರಿಂದ 2021-22ರಲ್ಲಿ ಶೇಕಡಾ 8.1 ಕ್ಕೆ ಇಳಿಸಿತ್ತು. ಇದು 1977-78ರ ನಂತರ ಅತ್ಯಂತ ಕಡಿಮೆ ಇಪಿಎಫ್ ಬಡ್ಡಿ ದರವಾಗಿತ್ತು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಪ್ರಮುಖ ನಿರ್ದಾರ ಕೈಗೊಳ್ಳುವ ಸಂಘಟನೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಮಂಗಳವಾರ ನಡೆದ ತನ್ನ ಸಭೆಯಲ್ಲಿ 2022-23 ಕ್ಕೆ ಇಪಿಎಫ್‌ನಲ್ಲಿ ಶೇಕಡಾ 8.15 ರಷ್ಟು ಬಡ್ಡಿದರವನ್ನು ಒದಗಿಸಲು ನಿರ್ಧರಿಸಿದೆ ಎಂದು ಮೂಲವೊಂದು ತಿಳಿಸಿದೆ.
2020-21ರ EPF ಠೇವಣಿಗಳ ಮೇಲಿನ 8.5 ಶೇಕಡಾ ಬಡ್ಡಿ ದರವನ್ನು CBT ಮಾರ್ಚ್ 2021 ರಲ್ಲಿ ನಿರ್ಧರಿಸಿದೆ.
CBT ಯ ನಿರ್ಧಾರದ ನಂತರ, 2022-23 ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.
ಸರಕಾರದ ಅನುಮೋದನೆಯ ನಂತರ, 2022-23 ರ EPF ಮೇಲಿನ ಬಡ್ಡಿ ದರವನ್ನು EPFO ನ ಐದು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.