ವೃದ್ಧೆ ಕಾಣೆ

ಮಂಗಳೂರು, ಮಾ.28: ನಗರದ ತೋಕೂರು ಗ್ರಾಮದ ಕ್ಲಲಾಪು ರೈಲ್ವೇ ಗೇಟ್ ಬಳಿ ವಾಸವಾಗಿದ್ದ ನಾಗಮ್ಮ ಶೆಟ್ಟಿಗಾರ್ (85) ಮಾ. 10 ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4.6 ಅಡಿ ಎತ್ತರದ, ಎಣ್ಣೆ ಕಪ್ಪುಮೈ ಬಣ್ಣದ, ಸಾಧಾರಣ ಶರೀರದ ಇವರು ಕಾಣೆಯಾದ ದಿನ ನೀಲಿ ಬಣ್ಣದ ಸೀರೆ ಧರಿಸಿರುತ್ತಾರೆ. ಇವರು ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ದೂ.ಸಂ: 0824-2290533, 9480805359, 9480805332 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಂ 0824-2220800ನ್ನು ಸಂಪರ್ಕಿಸುವಂತೆ ಮುಲ್ಕಿ ಪೊಲೀಸ್ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story