ಮಂಗಳೂರು: ಹಣ ಅಕ್ರಮ ಸಾಗಾಟ ಆರೋಪ; ಪ್ರಕರಣ ದಾಖಲು
ಮಂಗಳೂರು, ಮಾ.28: ನಗರದ ರಥಬೀದಿಯ ಬಳಿ ಸೋಮವಾರ ಸಂಜೆ 5ಕ್ಕೆ ಕಾರೊಂದನ್ನು ತಡೆದು ಪರಿಶೀಲಿಸಿದ ಸಿಸಿಬಿ ಘಟಕದ ಪೊಲೀಸರು ಕಾರಿನ ಡ್ಯಾಶ್ ಬೋರ್ಡ್‌ನಲ್ಲಿದ್ದ 3,23,600 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕಾರು ಚಾಲಕ ಬಂಟ್ವಾಳ ಅಮ್ಮುಂಜೆಯ ಮೂಡಾಯಿ ಕೋಡಿಯ ನಿವಾಸಿ ಸಿ.ಎಂ ಹಝೀಮ್ (21) ಎಂಬಾತನನ್ನು ವಿಚಾರಿಸಿದಾಗ ಆತ ತಾನು ಈ ಹಣವನ್ನು ತನ್ನ ಚಿಕ್ಕಪ್ಪ ಇಸ್ಮಾಯಿಲ್ ರಥಬೀದಿಯ ಚಿನ್ನದ ಅಂಗಡಿಯೊಂದರಿಂದ ತೆಗೆದುಕೊಂಡು ಹೋಗಿ ಬಿ.ಸಿ.ರೋಡ್‌ನಲ್ಲಿರುವ ಅವರ ಪತ್ನಿಗೆ ನೀಡುವಂತೆ ತಿಳಿಸಿದ್ದಾರೆ. ಅದರಂತೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಹಣ, ಕಾರು ಮತ್ತು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
Next Story