ಮಾ.31: ಫಾದರ್ ಮುಲ್ಲರ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ನ ಪದವಿ ಪ್ರದಾನ ಸಮಾರಂಭ ಮಾ.31ರಂದು ಮಧ್ಯಾಹ್ನ 2.30ಕ್ಕೆ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಆಂತೋನಿ ಸಿಲ್ವನ್ ಡಿಸೋಜ ತಿಳಿಸಿದ್ದಾರೆ.
ನಗರದ ಲೇಡಿಹಿಲ್ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 157 ಮಂದಿಗೆ ಎಂಬಿಬಿಎಸ್ ಪದವಿ, 73 ಮಂದಿಗೆ ಎಂಡಿ ಹಾಗೂ ಎಂಎಸ್ ಪದವಿ , 40 ಮಂದಿಗೆ ಸ್ನಾತಕೋತ್ತರ ಫಿಸಿಯೋಥೆರಪಿ ಪದವಿ, 9 ಮಂದಿಗೆ ಮಾಸ್ಟರ್ ಫಿಸಿಯೋಥೆರಪಿ ಪದವಿ, 32 ಮಂದಿಗೆ ವಾಕ್ ಮತ್ತು ಶ್ರವಣ ಪದವಿ, 12 ಮಂದಿಗೆ ಆಡಿಯೋಲಜಿ ಸ್ನಾತಕೋತ್ತರ ಪದವಿ ಹಾಗೂ 12 ಮಂದಿಗೆ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಜಿಯಲ್ಲಿ ಸ್ನಾತಕೋತ್ತರ ಪದವಿ ನೀಡಲಿದ್ದೇವೆ. ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಅಧ್ಯಕ್ಷ ರೆವರಂಡ್ ಫಾದರ್ ಪೀಟರ್ ಪಾವ್ಲ್ ಸಾಲ್ಡಾನಾ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಕೆ. ರಮೇಶ್, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ನ ರಿಜಿಸ್ಟ್ರಾರ್ ಪ್ರೊ.ಪ್ರಸನ್ನಕುಮಾರ್ ಒ ಹಾಗೂ ಟ್ರೈನ್ಡ್ ನರ್ಸಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ರಾಯ್ ಕೆ.ಜಾರ್ಜ್ ಭಾಗವಹಿಸಲಿ ದ್ದಾರೆ ಎಂದವರು ತಿಳಿಸಿದ್ದಾರೆ.
ಘಟಿಕೋತ್ಸವದಲ್ಲಿ ಒಟ್ಟು 100 ಪದವೀಧರರು ಪದವಿ ಸ್ವೀಕಾರ ಮಾಡಲಿದ್ದು, ಇದೇ ವೇಳೆ ಸಂಪೂರ್ಣ ಸ್ವಯಂ ಚಾಲಿತವಾಗಿರುವ ಕೇಂದ್ರೀಯ ಪ್ರಯೋಗಾಲಯವನ್ನು ಉದ್ಘಾಟಿಸ ಠಲಾಗುವುದು ಹಾಗೂ ಜಿಎನ್ಎಂ, ಬಿಎಸ್ಸಿ ನಸಿರ್ಂಗ್, ಪಿಬಿ-ಬಿಎಸ್ಸಿ ಮತ್ತು ಎಂಎಸ್ಸಿ ನಸಿರ್ಂಗ್ ಬ್ಯಾಚ್ನ ಹೊರ ಹೋಗುವ ಒಟ್ಟು 195 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದು ಡೀನ್ ತಿಳಿಸಿದ್ದಾರೆ .
ಸುದ್ದಿಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಕಾಲೇಜಿನ ಪ್ರಾಂಶುಪಾಲೆ ಡಾ.ಹಿಲ್ಡಾ ಡಿಸೋಜ, ಫಾದರ್ ಮುಲ್ಲರ್ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಜೆಸಿಂತಾ ಡಿಸೋಜ ಹಾಗೂ ಡಾ.ಕೆವಿನ್ ಉಪಸ್ಥಿತರಿದ್ದರು.