ವರುಣಾದಲ್ಲಿ ನಾನು ಮತಯಾಚನೆಗೆ ಬರಲ್ಲ...: ಸಿದ್ದರಾಮಯ್ಯ
ಮೈಸೂರು,ಮಾ.;29: 'ನಾವು ಕೊಟ್ಟ ಭರವಸೆ ಈಡೇರಿಸದಿದ್ದರೇ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಬಿಳುಗುಲಿ ಗ್ರಾಮದಲ್ಲಿ ಬುಧವಾರ ಮಾತನಾಡಿದ ಸಿದ್ದರಾಮಯ್ಯ , 'ಬಾದಾಮಿ ಕ್ಷೇತ್ರ ದೂರವಾಗಿದ್ದರಿಂದ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಅಳೆದು ತೂಗಿ ಹೈಕಮಾಂಡ್ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳಿದೆ. ವರುಣಾದಲ್ಲಿ ನಾನು ಮತಯಾಚನೆಗೆ ಬರಲ್ಲ. ಯತೀಂದ್ರ ಸಿದ್ದರಾಮಯ್ಯ ಬರಲಿದ್ದಾರೆ. ಹೈಕಮಾಂಡ್ ನಿರ್ಧರಿಸಿದ ಮೇಲೆ ಯತೀಂದ್ರ ಸ್ವಾಗತಿಸಿದ್ದಾರೆ. ನಾನು ರಾಜ್ಯ ಸುತ್ತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ' ಎಂದರು.
'ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಒಂದೇ ಒಂದು ಮನೆ ಕೊಡಲಿಲ್ಲ. ನಾವು ಅಧಿಕಾರದಲ್ಲಿದ್ದಾಗ 15 ಲಕ್ಷ ಮನೆಗಳನ್ನ ಕಟ್ಟಿಸಿಕೊಟ್ಟಿದ್ದವು. ನಾವು ಮತ್ತೆ ಅಧಿಕಾರಕ್ಕೆ ಬಂದರೆ 20ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ' ಎಂದು ಭರವಸೆ ನೀಡಿದರು.
'ಬೊಮ್ಮಾಯಿ ಮಾತೆತ್ತಿದ್ದರೇ ಧರ್ಮರಾಯನ ತರ ಮಾತನಾಡುತ್ತಾರೆ. ರಾಜ್ಯದಲ್ಲಿ 40 ಪರ್ಸೆಂಟ್ ಬೆಂಗಳೂರಿಲ್ಲಿ 50ಪರ್ಸೆಂಟ್ ಇದೆ. 40 ಪರ್ಸೆಂಟ್ ಸರ್ಕಾರವೆಂದು ಹೇಳಿದರೇ ದಾಖಲೆ ಕೇಳುತ್ತಾರೆ. ಆಗಾದರೇ ಲೋಕಾಯುಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದೇಕೆ..? ಪೊಲೀಸ್ ನೇಮಕಾತಿ ಬಿ.ಎಸ್.ಯಡಿಯೂರಪ್ಪ ಅವರ ಮಗನ ಮನೆಯಲ್ಲೇ ನಡೆದಿದೆ ಎಂದು ಆರೋಪಿಸಿದ ಅವರು, ಒಂದೊಂದು ಹುದ್ದೆಗೆ 50 ರಿಂದ 80ಲಕ್ಷ ಬೇಡಿಕೆ ಇಟ್ಟಿದ್ದಾರೆ. ನನ್ನ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನ ನೋಡೇ ಇಲ್ಲ' ಎಂದು ಕಿಡಿಕಾರಿದರು.