ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಗಡಿಪಾರು
ಬೆಂಗಳೂರು, ಮಾ.30: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ವರದಿ ಅನ್ವಯ ರೌಡಿ ನಾಗರಾಜ್ ಯಾನೆ ವಿಲ್ಸನ್ ಗಾರ್ಡನ್ ನಾಗನನ್ನು 6 ತಿಂಗಳು ಅವಧಿಗೆ ಗಡಿಪಾರು ಮಾಡಲಾಗಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಗಡಿಪಾರಿನ ಪ್ರಕ್ರಿಯೆ ಮುಗಿಸಿ ಆರು ತಿಂಗಳು ನಗರಕ್ಕೆ ಪ್ರವೇಶ ಮಾಡದಂತೆ ಉಲ್ಲೇಖಿಸಿ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರದಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ಆರು ತಿಂಗಳವರೆಗೂ ಸೂಚಿಸಿರುವ ಪ್ರದೇಶಗಳಿಗೆ ವಿಲ್ಸನ್ ಗಾರ್ಡನ್ ನಾಗ ಬರುವಂತಿಲ್ಲ. ಯಾವುದೇ ಚಟುವಟಿಕೆಯಲ್ಲಿ ತೊಡಗುವಂತಿಲ್ಲ ಎಂದು ಸೂಚಿಸಲಾಗಿದೆ.
ಅಲ್ಲದೆ, ಈಗಾಗಲೇ ಸೆಕ್ಷನ್ 110ನಡಿ ಬಾಂಡ್ ಬರೆಸಿಕೊಂಡು ಎಚ್ಚರಿಕೆ ನೀಡಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
Next Story