ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ಸಹಕರ ನೀಡಬೇಕು: ಚುನಾವಣಾಧಿಕಾರಿ ಮಧನ್ ಮೋಹನ್
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ಆಭ್ಯರ್ಥಿಗಳು ಹಾಗೂ ಮತದಾರರು ಸಹಕರ ನೀಡಬೇಕೆಂದು ಕಾರ್ಕಳ ವಿಧಾನ ಸಭಾ ಚುನಾವಣಾಧಿಕಾರಿ ಮಧನ್‌ಮೋಹನ್ ತಿಳಿಸಿದರು.
ಕಾರ್ಕಳ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಕಳ ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲಿ 23 ಸೆಕ್ಟರ್‌ಗಳನ್ನು ರೂಪಿಸಲಾಗಿದೆ. ಸಹಾಯ ಚುನಾವಣಾಧಿಕಾರಿ ಯಾಗಿ ಇಬ್ಬರನ್ನು ನಿಯೋಜಿಸಲಾಗಿದೆ. ನೋಡಲ್ ಅಧಿಕಾರಿಗಳಾಗಿ ತಾ.ಪಂ ಕಾರ್ಯನಿವಾಹಕರನ್ನು ಇಬ್ಬರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿ ಗಳು ಸಹಕರಿಸಲಿದ್ದಾರೆ.15 ಮತಗಟ್ಟೆಗಳಿಗೆ ಸೆಕ್ಟರ್ ಅಧಿಕಾರಿ ಇರುತ್ತಾರೆ. ಇವರೆಲ್ಲರ ಮೇಲ್ವಿಚಾರಣೆಯಲ್ಲಿ ಚುನಾವಣೆಯ ತಯಾರಿ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಹೇಳಿದರು.
ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಂಚಾರಿ ದಳವು ಕ್ಷೇತ್ರ ವ್ಯಾಪ್ತಿಯಲ್ಲಿ ತಿರುಗಾಡಲಿದೆ. ಒಂದು ತಂಡದಲ್ಲಿ ಮೂವರಂತೆ ಒಟ್ಟು ಒಂಭತ್ತು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಕ್ಷೇತ್ರದ ಸಾಣೂರು, ಮುಂಡ್ಕೂರು ಸಂಕಲಕರಿಯ, ಈದು. ಮಾಳ, ನಾಡ್ಪಾಲುನಲ್ಲಿ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ಮತಗಟ್ಟೆ ಬರಲು ಅಶಕ್ತರಾದ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ, ವಿಕಲಚೇತನರಿಗೆ ಅಂಚೆ ಮತದಾನ ಮಾಡಲು ಅವಕಾಶ ಒದಗಿಸಲಾಗಿದೆ. ಈಗಾಗಲೇ ಅಂತವರನ್ನು ಬೂತ ಮಟ್ಟದ ಅಧಿಕಾರಿಗಳು ಸಂಪರ್ಕಿಸುತ್ತಿದ್ದಾರೆ ಎಂದು ಚುನಾವಣಾ ಧಿಕಾರಿ ಹೇಳಿದರು.
ಒಬ್ಬ ಅಭ್ಯರ್ಥಿ ಚುನಾವಣೆಗಾಗಿ ಸುಮಾರು ಗರಿಷ್ಠ 40 ಲಕ್ಷ ರೂಪಾಯಿ ಖರ್ಚು ಮಾಡಬಹುದು ಹಾಗೂ ಚುನಾವಣಾ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳು ಎಷ್ಟು ಖರ್ಚು ಮಾಡಿದ್ದಾರೆ ಎನ್ನುವ ಲೆಕ್ಕಚಾರಕ್ಕೆ ಪಡೆಯಲು ತಂಡವನ್ನು ರಚಿಸಿ ಮಾಹಿತಿ ಕಲೆ ಹಾಕಲಾಗುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ 2 ರೀತಿಯ ಮತಗಟ್ಟೆಗಳನ್ನು ಮಾತ್ರ ಗುರುತಿಸಲಾಗುತ್ತಿದೆ. ಮತದಾನಕ್ಕೆ ಪ್ರಭಾವ ಹಾಗೂ ವಿರೋಧ ವ್ಯಕ್ತಪಡಿಸುವ ಪ್ರದೇಶಗಳನ್ನು ಗುರುತಿಸಲಾ ಗುತ್ತಿದೆ. ಚುನಾವಣಾ ಸಂದರ್ಭದಲ್ಲಿ ಎಡಿಜಿಪಿ ನೆತೃತ್ವದಲ್ಲಿ ಚುನಾವಣಾ ವೀಕ್ಷಕರ ಮಾಹಿತಿ ಕ್ರೋಢೀಕರಿಸಲಿದೆ ಎಂದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 188376 ಮತದಾರರು ಇದ್ದಾರೆ. ಅವರಲ್ಲಿ 90347 ಪುರುಷರು, 98028 ಮಹಿಳೆಯರು ಒಳಗೊಂಡಿದ್ದಾರೆ. ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ದೂರುಗಳು ಹಾಗೂ ಮಾಹಿತಿಗಾಗಿ 24*7 ದೂರವಾಣಿ ಸಂಖ್ಯೆ 08258-295400 ಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸಮಾರಂಭಗಳಿಗೆ ಅನುಮತಿ ಪಡೆಯಲು 48 ಘಂಟೆಗಳ ಮೊದಲೇ ಅರ್ಜಿಯನ್ನು Suvidha.eci.gov.in ಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಚುನಾವಣಾ ಅಭ್ಯರ್ಥಿಗಳ ಬ್ಯಾನರ್ ಗಳು ಕಂಡುಬಂದರೆ cvigil ಅಪ್ಲಿಕೇಶನ್ ನಲ್ಲಿ ನಮೂದಿಸಿದರೆ, ಅಧಿಕಾರಿಗಳ ತಂಡವು ಆಗಮಿಸಿ ಎರಡು ಗಂಟೆಗಳಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಕಳ ತಹಶೀಲ್ದಾರ್ ಅನಂತಶಂಕರ್.ಬಿ., ಹೆಬ್ರಿ ತಹಶೀಲ್ದಾರ್ ಪುರಂದರ, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗುರುದತ್, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.