ಕೊಣಾಜೆ: ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮ
ಕೊಣಾಜೆ: ಕಥೋಲಿಕಾ ಸ್ತ್ರೀ ಸಂಘಟನೆ ದಕ್ಷಿಣ ವಲಯ ಮತ್ತು ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಅಫ್ ಒಂಕಾಲೊಜಿ, ಟಾಟಾ ಟ್ರಸ್ಟ್ಸ್ ಇದರ ಸಹಕಾರದಲ್ಲಿ ಹಾಗೂ ಸಾರ್ವಜನಿಕ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಆಶ್ರಯದಲ್ಲಿ ಮಹಿಳಾ ಆರೋಗ್ಯ ಯೋಗ ಕ್ಷೇಮ ಜಾಗ್ಯತಿ ಕಾರ್ಯಕ್ರಮದ ಶಿಬಿರವು ನಿತ್ಯಾಧರ ಚರ್ಚ್ ವಠಾರದಲ್ಲಿ ನಡೆಯಿತು.
ವಂ. ಪಾ. ಅಂತೋನಿ ಲಸ್ತಾದೋ ಶಿಬಿರವನ್ನು ಉದ್ಘಾಟಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಿದರು. ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮಹಮ್ಮದ್ ಗುತ್ತಿಗಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಒಂಕಾಲೊಜಿ ವಿಭಾಗದ ವೈದ್ಯರಾದ ಡಾ. ರಾಜೇಶ್ ಕೃಷ್ಣ ಮತ್ತು ಡಾ. ಲೇಪಾಕಿ ಅತಿಥಿಗಳಾಗಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ನೀಡಿದರು. ಸಮುದಾಯ ದಂತ ವಿಭಾಗ ಮುಖ್ಯಸ್ಥರಾದ ಡಾ. ರೇಖಾ. ಪಿ.ಶೆಣ್ಣೆ ಅವರು ಬಾಯಿಯ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಸಮಾಜಕಾರ್ಯ ವಿಭಾಗದ ಡಾ. ಐರಿಸ್ ವೇಗನ್ ಅವರು ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕಂಠದ ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು. ಶಿಬಿರದಲ್ಲಿ 104 ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.