ಎ.3: ರಾಷ್ಟ್ರಮಟ್ಟದ ಅಂತರ್ ಕಾಲೇಜು ಸ್ಪರ್ಧೆ
ಮಂಗಳೂರು, ಮಾ.31: ನಗರದ ಸಂತ ಆಗ್ನೆಸ್ ಕಾಲೇಜು ವತಿಯಿಂದ ರಾಷ್ಟ್ರಮಟ್ಟದ ಅಂತರ್ ಕಾಲೇಜು ವಾರ್ಷಿಕ ಸ್ಪರ್ಧೆ ‘‘ಆಗ್ನೋಫೆಸ್ಟ್-ಚದುರಂಗ’ ಎ.3ರಂದು ಬೆಳಗ್ಗೆ 9:15ಕ್ಕೆ ಕಾಲೇಜಿನ ಮದರ್ ಮೇರಿ ಅಲೋಶಿಯಾ ಸೆಂಚುರಿ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ಝುಬೇದಾ ಎಚ್. ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಂತಾರ’ ಖ್ಯಾತಿಯ ನಟ ಸ್ವರಾಜ್ ಶೆಟ್ಟಿ ಹಾಗೂ ಏಷ್ಯಾದ ಫಾಸ್ಟೆಸ್ಟ್ ಸ್ಪೀಡ್ ಪೈಂಟರ್-ಆರ್ಟಿಸ್ಟ್ ವಿಲಾಸ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 6ಕ್ಕೆ ನಡೆಯುವ ಸಮಾರೋಪದಲ್ಲಿ ಉದ್ಯಮಿ ವತಿಕಾ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
‘ಆಗ್ನೋಫೆಸ್ಟ್-ಚದುರಂಗ’ದಲ್ಲಿ (ಚದುರಂಗ ಚಾಂಪಿಯನ್), ಖಾದ್ಯ (ಬೆಂಕಿ ರಹಿತ ಅಡುಗೆ), ಸ್ವರೂಪ (ನೃತ್ಯ-ನಾಟಕ), ಕೃತಿ (ಆವಿಷ್ಕಾರ), ಅಣಕು ಮಾಧ್ಯಮ (ಮಾಕ್ ಪ್ರೆಸ್), ಅವಿನ್ಯ (ಉತ್ಪನ್ನ ಬಿಡುಗಡೆ), ಸಂಶೋಧನ (ಸಂಶೋಧನಾ ಪೋಸ್ಟರ್), ವಾಕ್ಸಮರ (ಚರ್ಚಾ ಸ್ಪರ್ಧೆ), ರಚನಾ (ರೀಲ್ ಮೇಕಿಂಗ್) ಹೆಜ್ಜೆಗೆ ಹೆಜ್ಜೆ ಎಂಬ ವಿಶೇಷ 9 ಕಾರ್ಯಕ್ರಮವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕರಾದ ರವೀನಾ ಮಸ್ಕರೇನ್ಹಸ್, ಆ್ಯಡ್ಲಿನ್ ರೆಂಜಾಲ್, ಮಹಿಮಾ ವರ್ಗೀಸ್, ಛಾಯಾ ಉಪಸ್ಥಿತರಿದ್ದರು.