ಕುಂದಾಪುರ ಪುರಸಭೆ: ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಮಾ.31: ಕುಂದಾಪುರ ಪುರಸಭಾ ವ್ಯಾಪ್ತಿಯ ವಾಸ್ತವ್ಯ, ವಾಣಿಜ್ಯ ಕಟ್ಟಡ ಹಾಗೂ ಖಾಲಿ ನಿವೇಶನಗಳ ಮಾಲಕರು, 2023-24ನೇ ಸಾಲಿನ ಆಸ್ತಿ ತೆರಿಗೆಯನ್ನು ಎ.30ರ ಒಳಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ಪಡೆಯಬಹುದು.
ಜೂನ್ 30ರವರೆಗೆ ದಂಡ ರಹಿತವಾಗಿ ಆಸ್ತಿತೆರಿಗೆ ಪಾವತಿಸಲು ಅವಕಾಶವಿದ್ದು, ಜುಲೈ1ರ ನಂತರ ಪಾವತಿಸಿ ದ್ದಲ್ಲಿ ತಿಂಗಳಿಗೆ ಶೇ.2ರ ದಂಡವನ್ನು ವಿಧಿಸಲಾಗುವುದು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story