ದ್ವೇಷ ಭಾಷಣ ಆರೋಪ: ವೈದ್ಯ ಪ್ರಸಾದ್ ಭಂಡಾರಿ ವಿರುದ್ಧ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು
ಮಂಗಳೂರು, ಎ.1: ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಪ್ರಸಾದ್ ಭಂಡಾರಿ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿರುವ ಮಂಗಳೂರು ಧರ್ಮಪ್ರಾಂತ ಮತ್ತು ಕೆಥೋಲಿಕ್ ಚರ್ಚ್, ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶನಿವಾರ ದೂರು ಸಲ್ಲಿಸಲಾಯಿತು.
ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಪರವಾಗಿ ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ.ಫಾ.ಡಾ.ಜೆ.ಬಿ.ಸಲ್ಡಾನ್ಹಾ ಮತ್ತು ರಾಯ್ ಕ್ಯಾಸ್ತಲಿನೊ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಅಧ್ಯಕ್ಷ ಸ್ಟ್ಯಾನಿ ಲೋಬೊ ದೂರು ನೀಡಿದರು.
ಕೆಥೋಲಿಕ್ ಸಭಾ ಪದಾಧಿಕಾರಿಗಳಾದ ನೊರೀನ್ ಪಿಂಟೊ, ಅಲ್ಫೋನ್ಸ್ ಫೆರ್ನಾಂಡೀಸ್, ವಿನೋದ್ ಪಿಂಟೊ, ಫ್ರಾನ್ಸಿಸ್ ಸೆರಾರಾವ್, ಆರ್ಥರ್ ಡಿಸೋಜ, ಲ್ಯಾನ್ಸಿ ಮಸ್ಕರೇನ್ಹಸ್, ಕಾಲಿನ್ ಮಿರಾಂದಾ, ಸ್ಟ್ಯಾನಿ ಬಂಟ್ವಾಳ್ ನಿಯೋಗದಲ್ಲಿದ್ದರು.
Next Story