ಎ.4ರಂದು ತನುಶ್ರೀ ಪಿತ್ರೋಡಿಯಿಂದ 8ನೆ ವಿಶ್ವದಾಖಲೆ ಪ್ರಯತ್ನ
ಉಡುಪಿ, ಎ.1: ವಿಶ್ವದಾಖಲೆಗಳ ಸರದಾರಿಣಿ ಯೋಗರತ್ನ ತನುಶ್ರೀ ಪಿತ್ರೋಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ನಾಟ್ಯ ಶಾಸ್ತ್ರದ 108 ಕರಣಗಳನ್ನು ಪ್ರದರ್ಶಿಸುವ ಮೂಲಕ ಎಂಟನೇ ವಿಶ್ವದಾಖಲೆಯ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತನುಶ್ರೀಯ ಗುರು ರಾಮಕೃಷ್ಣ ಕೊಡಂಚ, ಕಾಲಿನ ಚಲನೆ, ಕೈಗಳ ಚಲನೆ ಹಾಗೂ ದೇಹದ ಭಂಗಿಯ ಸಂಯೋಜನೆಯೇ 108 ಕರಣಗಳು. ತನುಶ್ರೀ ಪಿತ್ರೋಡಿ ನಾಟ್ಯ ಶಾಸ್ತ್ರದ 108 ಕರಣಗಳ ಭಂಗಿಗಳನ್ನು ನಾಲ್ಕು ನಿಮಿಷದೊಳಗೆ ಮಾಡುವ ಮೂಲಕ ಎಂಟವೇ ವಿಶ್ವದಾಖಲೆ ಪ್ರಯತ್ನದಲ್ಲಿದ್ದಾರೆ. ಈ ರೀತಿಯ ದಾಖಲೆ ಯನ್ನು ಈವರೆಗೆ ಯಾರು ಮಾಡಿಲ್ಲ. ತನುಶ್ರೀಯೇ ಪ್ರಥಮ ಬಾರಿಗೆ ಮಾಡುತ್ತಿ ದ್ದಾರೆ ಎಂದರು.
ಎ.4ರಂದು ಸಂಜೆ 4ಗಂಟೆಗೆ ಬನ್ನಂಜೆ ಶ್ರೀನಾರಾ ಯಣಗುರು ಆಡಿಟೋರಿಯಂನಲ್ಲಿ ತನುಶ್ರೀ ಈ ದಾಖಲೆಯ ಪ್ರಯತ್ನ ಮಾಡಲಿರುವರು. ಈ ಸಂದರ್ಭದಲ್ಲಿ ಭರತ ನಾಟ್ಯ ಪ್ರದರ್ಶನ, ಎಂಟು ವಿದ್ವಾಂಸರಿಗೆ ಗುರು ವಂದನೆ ಕಾರ್ಯಕ್ರಮ ಕೂಡ ನಡೆಯಲಿದೆ. ತನುಶ್ರೀ ಈವರೆಗೆ ಒಂದು ಗಿನ್ನಿಸ್ ವಲ್ಡ್ ರೆಕಾರ್ಡ್ ಮತ್ತು ಆರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತನುಶ್ರೀ ಪಿತ್ರೋಡಿ, ಉದಯ ಕುಮಾರ್, ವಿಜಯ ಕೋಟ್ಯಾನ್, ಸುರಭಿ ರತನ್ ಉಪಸ್ಥಿತರಿದ್ದರು.