ಉಡುಪಿ: ಚುನಾವಣಾ ಸಂಬಂಧಿಸಿ ದೂರು ನೀಡಲು ಕೇಂದ್ರ ಸ್ಥಾಪನೆ
ಉಡುಪಿ, ಎ.1: ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿ ದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಒಂದನೇ ಮಹಡಿಯ ಕೊಠಡಿ ಸಂಖ್ಯೆ ಎ204ರಲ್ಲಿ ಚುನಾವಣಾ ಸಂಬಂಧ ದೂರುಗಳ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸಾರ್ವಜನಿಕರು ಚುನಾವಣೆಗೆ ಸಂಬಂದಪಟ್ಟ ದೂರುಗಳಿದ್ದಲ್ಲಿ ಸಿ ವಿಜಿಲ್ ಆ್ಯಪ್ ಮೂಲಕ ಮತದಾರರ ಸಹಾಯವಾಣಿ ಕೇಂದ್ರ 1950 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 0820-2574991ಗೆ ಕರೆ ಮಾಡುವ ಮೂಲಕ ಹಾಗೂ ನ್ಯಾಶನಲ್ ಗ್ರಿವೆನ್ಸಸ್ ರಿಡ್ರೆಸ್ಸಲ್ ಸಿಸ್ಟಮ್ ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದೂರುಗಳ ಪರಿಹಾರ ಮತ್ತು ಮತದಾರರ ಸಹಾಯವಾಣಿಯ ನೋಡೆಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story