Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ‘ಸ್ಟಾರ್‌ಕ್ರೀಟ್’ ಭವಿಷ್ಯದ ನೆಲೆಗೆ ಭದ್ರ...

‘ಸ್ಟಾರ್‌ಕ್ರೀಟ್’ ಭವಿಷ್ಯದ ನೆಲೆಗೆ ಭದ್ರ ಬುನಾದಿಯಾದೀತೇ?

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ2 April 2023 10:26 AM IST
share
‘ಸ್ಟಾರ್‌ಕ್ರೀಟ್’ ಭವಿಷ್ಯದ ನೆಲೆಗೆ ಭದ್ರ ಬುನಾದಿಯಾದೀತೇ?

ಚಂದ್ರನ ಮೇಲೆ ಮಾನವ ಮೊದಲ ಹೆಜ್ಜೆ ಹಾಕಿ 50 ವರ್ಷಗಳು ಸಂದಿವೆ. ಅಂದಿನಿಂದ ಬಾಹ್ಯಾಕಾಶ ವಾಸಕ್ಕಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಈ ಪರಿಶೋಧನೆಯಲ್ಲಿ ಚಂದ್ರ ಮತ್ತು ಮಂಗಳ ಗ್ರಹವು ಮಾನವನ ಮೊದಲ ಭೂಮಿಯೇತರ ವಸಾಹತು ತಾಣವಾಗಲಿವೆ. ಚಂದ್ರ ಮತ್ತು ಮಂಗಳನಲ್ಲಿ ಮಾನವ ಜೀವನವನ್ನು ಬೆಂಬಲಿಸುವ ಹಾಗೂ ಅಲ್ಲಿನ ಜೀವಪರ ಸಾಮರ್ಥ್ಯವನ್ನು ಕುರಿತು ಅಧ್ಯಯನ ಮಾಡಲು ವಿವಿಧ ಬಾಹ್ಯಾಕಾಶ ಸಂಸ್ಥೆಗಳಿಂದ ಹಲವಾರು ಕಾರ್ಯಾಚರಣೆಗಳು ನಡೆಯುತ್ತಲೇ ಇವೆ. ಅದರಲ್ಲೂ ಮುಖ್ಯವಾಗಿ ಮಂಗಳ ಗ್ರಹದ ಮೇಲಿನ ಹಲವಾರು ಕಾರ್ಯಾಚರಣೆಗಳು ಮಾನವನ ಭವಿಷ್ಯದ ನೆಲೆಯನ್ನು ಹುಡುಕತೊಡಗಿವೆ.

1976ರ ವೈಕಿಂಗ್-1 ಮಿಷಿನ್‌ನಿಂದ 2021ರ ಪೆರ್ಸವೆರೆನ್ಸ್ ವರೆಗಿನ ಬಹುತೇಕ ಬಾಹ್ಯಾಕಾಶ ನೌಕೆಗಳು ಮಾನವನ ನೆಲೆಗಾಗಿ ಮಹತ್ವದ ಸಂಶೋಧನೆಗಳನ್ನು ಮಾಡಿವೆ. 2004ರ ಅಪರ್ಚುನಿಟಿ ನೌಕೆಯು ಮಂಗಳನಲ್ಲಿ ನೀರಿಗಾಗಿ ಹುಡುಕಾಟ ನಡೆಸಿತ್ತು. 2008ರ ಫಿನಿಕ್ಸ್ ನೌಕೆಯು ಮಂಗಳನಲ್ಲಿ ಸೂಕ್ಷ್ಮಜೀವಿಗಳಿಗಾಗಿ ಹುಡುಕಾಟ ನಡೆಸಿತ್ತು. 2012ರ ಕ್ಯೂರಿಯಾಸಿಟಿ ನೌಕೆಯು ಮಂಗಳನಲ್ಲಿ ಮಾನವನ ವಾಸಯೋಗ್ಯತಾ ನೆಲೆಗಾಗಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿತು.

ಪರ್ಸವೆರೆನ್ಸ್ ಕೂಡಾ ಮಂಗಳನಲ್ಲಿ ಸೂಕ್ಷ್ಮಜೀವಿಗಳಿಗಾಗಿ ಹುಡುಕುತ್ತಿದೆ. ಒಂದೆಡೆ ಬಾಹ್ಯಾಕಾಶ ನೌಕೆಗಳಿಂದ ಮಾನವ ನೆಲೆಗಾಗಿ ಹುಡುಕಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಮಂಗಳನಲ್ಲಿ ನೆಲೆಸಲು ಕಟ್ಟಡ ನಿರ್ಮಾಣ ಕಾರ್ಯದ ಪೂರ್ವ ಸಿದ್ಧತೆಯೂ ನಡೆಯುತ್ತಿದೆ. ಮಂಗಳ ಗ್ರಹದಲ್ಲಿ ಮಾನವನ ಆವಾಸಸ್ಥಾನಗಳ ನಿರ್ಮಾಣಕ್ಕಾಗಿ ವಿಜ್ಞಾನಿಗಳು ವಿವಿಧ ವಸ್ತುಗಳನ್ನು ಪರೀಕ್ಷಿಸುತ್ತಿದ್ದಾರೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದಿರಿಸಿದ್ದಾರೆ. ಅವರು ಮಂಗಳನ ಮೇಲ್ಮೈ ಧೂಳಿನಿಂದ ಕೂಡಿದ ಹೊಸ ‘ಕಾಸ್ಮಿಕ್ ಕಾಂಕ್ರಿಟ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಇದನ್ನು ‘ಸ್ಟಾರ್‌ಕ್ರೀಟ್’ ಎಂದು ಕರೆಯಲಾಗುತ್ತದೆ. ಮೇಲ್ಮೈ ಧೂಳಿನ ಜೊತೆಗೆ, ಆಲೂಗೆಡ್ಡೆ ಪಿಷ್ಟ ಮತ್ತು ಉಪ್ಪುಬಳಸಿಕೊಂಡು ಕಾಂಕ್ರಿಟ್ ರಚಿಸಿದ್ದಾರೆ. ಧೂಳಿನೊಂದಿಗೆ ಆಲೂಗಡ್ಡೆ ಪಿಷ್ಟವನ್ನು ಬೆರೆಸಿದಾಗ, ಪಿಷ್ಟವು ಕಾಂಕ್ರಿಟ್‌ಗೆ ಬಂಧಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ತಂಡವು ಪ್ರದರ್ಶಿಸಿದೆ. ಸ್ಟಾರ್‌ಕ್ರೀಟ್ ಸಾಮಾನ್ಯ ಕಾಂಕ್ರಿಟ್‌ಗಿಂತ ಎರಡು ಪಟ್ಟು ಬಲವಾಗಿದೆ ಮತ್ತು ಹೊರಗಿನ ಪ್ರಪಂಚದಲ್ಲಿ ಯಾವುದೇ ನಿರ್ಮಾಣ ಕಾರ್ಯಕ್ಕೆ ಬಳಸಬಹುದು ಎಂದು ತಂಡವು ಹೇಳಿದೆ.

ಸ್ಟಾರ್‌ಕ್ರೀಟ್ 72 ಮೆಗಾಪ್ಯಾಸ್ಕಲ್ಸ್ ಬಲವನ್ನು ಹೊಂದಿದ್ದರೆ, ಸಾಮಾನ್ಯ ಕಾಂಕ್ರಿಟ್ 32 ಮೆಗಾಪ್ಯಾಸ್ಕಲ್ಸ್ ಬಲವನ್ನು ಹೊಂದಿದೆ ಎಂದು ಅಧ್ಯಯನವು ತಿಳಿಸಿದೆ. ಚಂದ್ರನ ಧೂಳಿನಿಂದ ಮಾಡಿದ ಕಾಂಕ್ರಿಟ್‌ಗಿಂತ ಸ್ಟಾರ್‌ಕ್ರೀಟ್ 91 ಮೆಗಾಪ್ಯಾಸ್ಕಲ್ಸ್‌ನಷ್ಟು ಹೆಚ್ಚು ಬಲವಾಗಿತ್ತು ಎಂಬುದು ಸಂಶೋಧಕರ ಅಭಿಮತ. ಒಂದು ಲೆಕ್ಕಾಚಾರದ ಪ್ರಕಾರ 25 ಕಿ.ಗ್ರಾಂ ಆಲೂಗಡ್ಡೆಯು ಸುಮಾರು ಅರ್ಧ ಟನ್ ಸ್ಟಾರ್‌ಕ್ರೀಟ್ ಅನ್ನು ಉತ್ಪಾದಿಸಲು ಬೇಕಾದ ಪಿಷ್ಟವನ್ನು ಹೊಂದಿರುತ್ತದೆ. ಇದು ಸಾಮಾನ್ಯ ಗಾತ್ರದ 213 ಇಟ್ಟಿಗೆಗಳ ಮೌಲ್ಯದ ವಸ್ತುಗಳಿಗೆ ಸಮನಾಗಿರುತ್ತದೆ.

ಉಪ್ಪು (ಮಂಗಳ ಗ್ರಹದಲ್ಲಿ ಕಂಡುಬರುವ ಮೆಗ್ನೀಸಿಯಮ್ ಕ್ಲೋರೈಡ್) ಮತ್ತು ಗಗನಯಾತ್ರಿಯ ಮೂತ್ರವು ಸ್ಟಾರ್‌ಕ್ರೀಟ್ ಬಲವರ್ಧನೆಗೆ ಸಹಾಯ ಮಾಡುತ್ತವೆ ಎಂದು ಅವರು ಕಂಡುಕೊಂಡಿದ್ದಾರೆ. ಈ ಹಿಂದೆ ಇದೇ ತಂಡವು ಮಾನವ ರಕ್ತ ಮತ್ತು ಮೂತ್ರವನ್ನು ಬಂಧಿಸುವ ಏಜೆಂಟ್ ಆಗಿ ಪರೀಕ್ಷಿಸಿತ್ತು. ಆದರೆ ದೊಡ್ಡ ಪ್ರಮಾಣದಲ್ಲಿ ಕಾಂಕ್ರಿಟ್ ತಯಾರಿಸಲು ಇದು ತೊಡಕಾಗಿತ್ತು. ಏಕೆಂದರೆ ಕಠಿಣವಾದ ಬಾಹ್ಯಾಕಾಶ ಪರಿಸರದಲ್ಲಿ ಗಗನಯಾತ್ರಿಗಳ ಆರೋಗ್ಯವು ಅಪಾಯಕ್ಕೆ ಒಳಗಾಗಬಹುದು ಎಂಬ ಆತಂಕ ಇತ್ತು.

ನಾವು ಗಗನಯಾತ್ರಿಗಳಿಗೆ ಪಿಷ್ಟವನ್ನು ಆಹಾರವಾಗಿ ಉತ್ಪಾದಿಸುವ ಕಾರಣ, ಅದನ್ನು ಮಾನವ ರಕ್ತಕ್ಕಿಂತ ಬಂಧಿಸುವ ಏಜೆಂಟ್ ಆಗಿ ನೋಡುವುದು ಅರ್ಥಪೂರ್ಣವಾಗಿದೆ. ಅಲ್ಲದೆ ಪ್ರಸಕ್ತ ಕಟ್ಟಡ ತಂತ್ರಜ್ಞಾನಗಳಿಗೆ ಇನ್ನೂ ಹಲವು ವರ್ಷಗಳ ಅಭಿವೃದ್ಧಿಯ ಅಗತ್ಯವಿದೆ ಮತ್ತು ಗಣನೀಯ ಶಕ್ತಿ ಮತ್ತು ಹೆಚ್ಚುವರಿ ಸಂಸ್ಕರಣಾ ಸಾಧನಗಳ ಅಗತ್ಯವಿರುತ್ತದೆ. ನೌಕೆಗೆ ತಗಲುವ ವೆಚ್ಚ ಮತ್ತು ಸಂಕೀರ್ಣತೆಯನ್ನು ಪರಿಗಣಿಸಿದರೆ ಸ್ಟಾರ್‌ಕ್ರೀಟ್ ತಯಾರಿಕೆಗೆ ಇದ್ಯಾವುದೂ ಅಗತ್ಯವಿಲ್ಲ ಎಂದು ಈ ಯೋಜನೆಯ ಪ್ರಮುಖ ಸಂಶೋಧಕರಾದ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಡಾ. ಅಲೆಡ್ ರಾಬರ್ಟ್ಸ್ ಹೇಳಿದ್ದಾರೆ.

ಬಹುಶಃ ಈ ಹೇಳಿಕೆಯಿಂದ ಸ್ಟಾರ್‌ಕ್ರೀಟ್ ತಯಾರಿಕೆಯಲ್ಲಿನ ಅವರ ಶ್ರಮ ಮತ್ತು ಸದುದ್ದೇಶ ಅರ್ಥವಾಗುತ್ತದೆ. ಪ್ರಸಕ್ತ ಬಾಹ್ಯಾಕಾಶದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವುದು ತುಂಬಾ ದುಬಾರಿಯಾಗಿದೆ ಮತ್ತು ಸಾಧಿಸಲು ಕಷ್ಟಕರವಾಗಿದೆ. ಭವಿಷ್ಯದ ಬಾಹ್ಯಾಕಾಶ ನಿರ್ಮಾಣವು ಗಗನಯಾತ್ರಿಗಳಿಗೆ ಸುಲಭವಾಗಿ ಲಭ್ಯವಿರುವ ಸರಳ ವಸ್ತುಗಳ ಮೇಲೆ ಅವಲಂಬಿತವಾಗಿದೆ. ಸ್ಟಾರ್‌ಕ್ರೀಟ್ ಈ ಎಲ್ಲಾ ಸಮಸ್ಯೆಗಳಿಗೆ ಒಂದು ಸಂಭವನೀಯ ಪರಿಹಾರವನ್ನು ನೀಡುತ್ತದೆ. ಭೂಮಿಯ ಮೇಲೆ ಬಳಸುವ ಸಾಂಪ್ರದಾಯಿಕ ಕಾಂಕ್ರಿಟ್‌ಗಿಂತ ಸ್ಟಾರ್‌ಕ್ರೀಟ್ ಹೆಚ್ಚು ಪರಿಸರ ಸ್ನೇಹಿ ಪರ್ಯಾಯವಾಗಿದೆ.

ಭೂಮಿಯ ಮೇಲೆ ಸಿಮೆಂಟ್ ಮತ್ತು ಕಾಂಕ್ರಿಟ್ ಉತ್ಪಾದನೆಯು ಶೇ. 8ರಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಕಾರಣವಾಗಿದೆ. ಏಕೆಂದರೆ ಇಟ್ಟಿಗೆ ತಯಾರಿಸುವ ಪ್ರಕ್ರಿಯೆಗೆ ಹೆಚ್ಚಿನ ತಾಪಮಾನದ ಶಾಖ ಮತ್ತು ಶಕ್ತಿಯ ಅಗತ್ಯವಿದೆ. ಆದರೆ ಸ್ಟಾರ್‌ಕ್ರೀಟ್ ಅನ್ನು ಸಾಮಾನ್ಯ ಓವನ್ ಅಥವಾ ಮೈಕ್ರೋವೇವ್‌ನಲ್ಲಿ ಸಾಮಾನ್ಯ ಹೋಮ್ ಬೇಕಿಂಗ್ ತಾಪಮಾನದಲ್ಲಿ ತಯಾರಿಸಬಹುದು. ಆದ್ದರಿಂದ ಉತ್ಪಾದನೆಗೆ ಕಡಿಮೆ ಶಕ್ತಿಯ ವೆಚ್ಚ ಬಳಕೆಯಾಗುತ್ತದೆ. ಹಾಗಾಗಿ ಸ್ಟಾರ್‌ಕ್ರೀಟ್ ತಯಾರಿಕೆಯಿಂದ ಇಂಗಾಲದ ಹೊರಸೂಸುವಿಕೆ ತಗ್ಗಲಿದೆ ಎಂದು ಸಂಶೋಧಕರ ತಂಡ ಹೇಳಿದೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮಾನವ ಶೀಘ್ರದಲ್ಲೆ ಮಂಗಳನ ಅಂಗಳದಲ್ಲಿ ನೆಲೆಯೂರಬಹುದೇ? ಎಂಬ ಕಾತುರ ಹೆಚ್ಚಾಗುತ್ತಿದೆ. ಅಲ್ಲಿವರೆಗೂ ಕಾದು ನೋಡೋಣ.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X