ಹಜ್ ಯಾತ್ರೆ 2023 | ರಾಜ್ಯದ 5 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆ: ರವೂಫುದ್ದೀನ್ ಕಚೇರಿವಾಲೆ
ಬೆಂಗಳೂರು, ಎ.1: ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ರಾಜ್ಯದಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಮುಹಮ್ಮದ್ ರವೂಫುದ್ದೀನ್ ಕಚೇರಿವಾಲೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಹಜ್ ಸಮಿತಿಯು ಮಾ.31ರಂದು ರಾತ್ರಿ ದೇಶದಾದ್ಯಂತ ಏಕಕಾಲಕ್ಕೆ ಆನ್‍ಲೈನ್ ಖುರ್ರಾ(ಲಾಟರಿ) ಮೂಲಕ ಯಾತ್ರಿಗಳನ್ನು ಆಯ್ಕೆ ಮಾಡಿತು. ಅದರಲ್ಲಿ ನಮ್ಮ ರಾಜ್ಯದ 5 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ ಎಂದರು.
ಈ ಬಾರಿ ಹಜ್ ಯಾತ್ರೆಗಾಗಿ ರಾಜ್ಯ ಹಜ್ ಸಮಿತಿಗೆ 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 5 ಸಾವಿರಕ್ಕೂ ಹೆಚ್ಚು ಮಂದಿ ಯಾತ್ರೆಗೆ ಆಯ್ಕೆಯಾಗಿದ್ದಾರೆ. ಅವರಿಗೆಲ್ಲ ಭಾರತೀಯ ಹಜ್ ಸಮಿತಿ ವತಿಯಿಂದ ಎಸ್.ಎಂ.ಎಸ್.ಮೂಲಕ ಮಾಹಿತಿ ಒದಗಿಸಲಾಗಿದೆ ಎಂದು ರವೂಫುದ್ದೀನ್ ಕಚೇರಿವಾಲೆ ಹೇಳಿದರು.
Next Story