ರಾಜ್ಯಮಟ್ಟದ ಪುನೀತ್ ಗಾನರತ್ನ ಸ್ಫರ್ಧೆ: ಶಾಝಿಲ್‌ಗೆ ತೃತೀಯ ಬಹುಮಾನ

ಮಂಗಳೂರು: ರಾಜ್ಯ ಸರಕಾರವು ಚಿತ್ರನಟ ಪುನೀತ್ ರಾಜಕುಮಾರ್ ಜನ್ಮ ದಿನವನ್ನು ‘ಸ್ಫೂರ್ತಿ ದಿನ’ವನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಜನಾರ್ದನ ಬಾಬು ಅವರ ಸಾರಥ್ಯದಲ್ಲಿ ನಗರದ ಪುರಭವನದಲ್ಲಿ ನಡೆದ ‘ಪುನೀತ್ ಗಾನ ರತ್ನ’ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಮಂಗಳೂರಿನ ಯು.ಕೆ. ಶಾಝಿಲ್ ಹಸನ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ನಗರದ ನ್ಯಾಷನಲ್ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಯು.ಎಚ್. ಖಾಲಿದ್ ಉಜಿರೆ ಮತ್ತು ಶಬಾನಾ ದಂಪತಿಯ ಪುತ್ರನಾಗಿರುವ ಶಾಝಿಲ್‌ಗೆ ರಾಜಕುಮಾರ್ ಕುಟುಂಬದ ಹಿರಿಯ ಸದಸ್ಯ ಚಿನ್ನೇಗೌಡ 5000 ರೂ.ನಗದು ಬಹುಮಾನ,ಪ್ರಶಸ್ತಿ ಫಲಕಗಳನ್ನು ವಿತರಿಸಿದರು.
Next Story





