ಐಪಿಎಲ್: ಆರ್‌ಸಿಬಿ ಗೆಲುವಿಗೆ 172 ರನ್ ಗುರಿ ನೀಡಿದ ಮುಂಬೈ ಇಂಡಿಯನ್ಸ್
ತಿಲಕ್ ವರ್ಮಾ ಭರ್ಜರಿ ಅರ್ಧಶತಕ

ತಿಲಕ್ ವರ್ಮಾ ಭರ್ಜರಿ ಅರ್ಧಶತಕ
ಬೆಂಗಳೂರು, ಎ.2: ತಿಲಕ್ ವರ್ಮಾ ಭರ್ಜರಿ ಅರ್ಧಶತಕದ(ಔಟಾಗದೆ 84 ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್)ಕೊಡುಗೆಯ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ ಟೂರ್ನಿಯ 5ನೇ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ.
ಎಂ.ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ರವಿವಾರ ಟಾಸ್ ಜಯಿಸಿದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಮುಂಬೈ ಪರ ತಿಲಕ್ ವರ್ಮಾ ಏಕಾಂಗಿ ಹೋರಾಟ ನೀಡಿದರು. 98 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ಮುಂಬೈ ಕಳಪೆ ಆರಂಭ ಪಡೆಯಿತು. ನೆಹಾಲ್ ವಧೇರ(21 ರನ್, 13 ಎಸೆತ), ಸೂರ್ಯಕುಮಾರ್ ಯಾದವ್(15 ರನ್, 16 ಎಸೆತ) ಹಾಗೂ ಅರ್ಷದ್ ಖಾನ್(ಔಟಾಗದೆ 15,9 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಆರ್‌ಸಿಬಿ ಪರ ಕರ್ಣ್ ಶರ್ಮಾ(2-32)ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಸಿರಾಜ್(1-21), ಟಾಪ್ಲೆ(1-14), ಬ್ರೆಸ್‌ವೆಲ್(1-16), ಆಕಾಶ್‌ದೀಪ್(1-29) ಹಾಗೂ ಹರ್ಷಲ್ ಪಟೇಲ್(1-37) ತಲಾ ಒಂದು ವಿಕೆಟ್ ಪಡೆದರು.
Next Story





