ಲೈಂಗಿಕ ಕಿರುಕುಳ ಆರೋಪ: ಚೆನ್ನೈ ಅಕಾಡೆಮಿಯ ಡ್ಯಾನ್ಸ್ ಪ್ರೊಫೆಸರ್ ಬಂಧನ

ಚೆನ್ನೈ: ಮಾಜಿ ವಿದ್ಯಾರ್ಥಿನಿಯೊಬ್ಬರು ನೀಡಿದ ಲೈಂಗಿಕ ಕಿರುಕುಳದ ದೂರಿನ ಆಧಾರದ ಮೇಲೆ ತಮಿಳುನಾಡಿನ ಶಾಸ್ತ್ರೀಯ ಕಲೆಗಳ ಪ್ರತಿಷ್ಠಿತ ಸಂಸ್ಥೆಯೊಂದರ ಸಹಾಯಕ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಾಕ್ಷೇತ್ರ ಫೌಂಡೇಶನ್‌ನ ರುಕ್ಮಿಣಿ ದೇವಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ ನೃತ್ಯ ಕಲಿಸುತ್ತಿರುವ ಹರಿ ಪದ್ಮನ್ ಅವರನ್ನು ನಗರ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಪ್ರೊಫೆಸರ್ ನೀಡಿರುವ ಲೈಂಗಿಕ ಕಿರುಕುಳದ ಕಾರಣಕ್ಕಾಗಿ ಕೆಲವು ವರ್ಷಗಳ ಹಿಂದೆ ಇನ್‌ಸ್ಟಿಟ್ಯೂಟ್‌ನಲ್ಲಿ ತನ್ನ ಸ್ನಾತಕೋತ್ತರ ಕಾರ್ಯಕ್ರಮವನ್ನು ನಿಲ್ಲಿಸಿದ್ದ ಮಾಜಿ ವಿದ್ಯಾರ್ಥಿನಿ NDTV ಜೊತೆ ಮಾತನಾಡುತ್ತಾ,ಪ್ರೊಫೆಸರ್ ನನ್ನನ್ನು ಅವರ ಮನೆಗೆ ಒಬ್ಬಳೇ ಬರುವಂತೆ ಆಹ್ವಾನಿಸಿದ್ದರು. ಅದಕ್ಕೆ ನಾನು ಒಪ್ಪದೇ ಇದ್ದಾಗ . ಅವರು ನನ್ನನ್ನು ನೃತ್ಯದಲ್ಲಿ ಪ್ರಮುಖ ಪಾತ್ರದಿಂದ ದೂರವಿಟ್ಟರು" ಎಂದು ಹೇಳಿದರು.
ಕಳೆದ ವಾರ, ತಮಿಳುನಾಡು ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಎಆರ್ ಕುಮಾರಿ ಅವರಿಗೆ ನೀಡಿದ ದೂರಿನಲ್ಲಿ ಸುಮಾರು 90 ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಮೌಖಿಕ ನಿಂದನೆಯ ಆರೋಪ ಹೊರಿಸಿದ್ದರು





