ಶಿವಮೊಗ್ಗ: ನವಜಾತ ಹೆಣ್ಣು ಶಿಶುವನ್ನು ಕಚ್ಚಿಕೊಂಡು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿದ ನಾಯಿ!

ಶಿವಮೊಗ್ಗ: ನಾಯಿಯೊಂದು ನವಜಾತ ಹೆಣ್ಣು ಶಿಶುವನ್ನು ಕಚ್ಚಿಕೊಂಡು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ.31 ರಂದು ಬೆಳಗಿನ ಜಾವ ನಾಯಿಯೊಂದು ನವಜಾತ ಶಿಶುವನ್ನು ಕಚ್ಚಿಕೊಂಡು, ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಬಳಿ ಓಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಪರಿಶೀಲಿಸಿದ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ, ನವಜಾತ ಹೆಣ್ಣು ಶಿಶುವನ್ನು ಹೆರಿಗೆ ವಾರ್ಡ್ ಗೆ ಕೊಂಡೊಯ್ದು ಪರೀಕ್ಷಿಸಿದ್ದಾರೆ. ಆಗ ಮಗು ಮೃತಪಟ್ಟಿರುವುದು ಗೊತ್ತಾಗಿದೆ.
ಆಗಷ್ಟೇ ಹುಟ್ಟಿದ ಮಗುವನ್ನು ಯಾರೋ ಮೆಗ್ಗಾನ್ಆಸ್ಪತ್ರೆ ಮಕ್ಕಳ ವಾರ್ಡ್ ಹಿಂಭಾಗ ಬಿಟ್ಟು ಹೋಗಿರುವ ಶಂಕೆ ಇದೆ. ಮಗು ಮೃತಪಟ್ಟಿದ್ದು, ನಾಯಿ ಕಚ್ಚಿಕೊಂಡು ಓಡಾಡಿದೆ. ಮಗುವನ್ನು ಅಲ್ಲಿ ಬಿಟ್ಟು ಹೋದ ತಂದೆ, ತಾಯಿ ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೆಗ್ಗಾನ್ ಆಸ್ಪತ್ರೆ ಭದ್ರತಾ ಸಿಬ್ಬಂದಿ ದೂರು ನೀಡಿದ್ದಾರೆ.
ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





