ಅರುಣ್ ಡಿಸೋಜರಿಗೆ 'ಮದರ್ ಥೆರೆಸಾ ಸದ್ಭಾವನಾ ಪ್ರಶಸ್ತಿ'

ಕೊಣಾಜೆ: ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಮತ್ತು ಸೃಷ್ಟಿ ಶಕ್ತಿ ಸಂಸ್ಥೆಯ ವತಿಯಿಂದ ನೀಡಲಾಗುವ ಮದರ್ ಥೆರೆಸಾ ಸದ್ಭಾವನಾ ಪ್ರಶಸ್ತಿಗೆ ಅಸೈಗೋಳಿಯ ಅರುಣ್ ಡಿಸೋಜ ಆಯ್ಕೆಯಾಗಿದ್ದಾರೆ.
ಆ್ಯಂಬುಲೆನ್ಸ್ ಚಾಲಕರಾಗಿರುವ ಇವರು ಎಳವೆಯಲ್ಲಿಯೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಡವರಿಗೆ, ಗರ್ಬಿಣಿಯರನ್ನು ಉಚಿತವಾಗಿ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೂ ಸಹಾಯ ಮಾಡುತ್ತಿದ್ದಾರೆ. ಜೋಸೆಫ್ ಡಿಸೋಜರ ಪುತ್ರರಾಗಿರುವ ಇವರು ಎ.8ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದ ಅಕ್ಕಾಮಹಾದೇವಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story