ಶಿಗ್ಗಾಂವ್ ಕ್ಷೇತ್ರದಿಂದಲೇ ಸ್ಪರ್ಧೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು,ಎ.3: 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ್ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬದಲಾಯಿಸುತ್ತೇನೆ ಎಂಬುದು ಆಧಾರರಹಿತ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಬಿಜೆಪಿಯ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿಯ ಮೇಲೆ ಮತ ಕೇಳುತ್ತದೆ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಇಡೀ ದೇಶದಲ್ಲೇ ಬಿಜೆಪಿ ಅತೀ ದೊಡ್ಡ ಪಕ್ಷ, ಕರ್ನಾಟಕದಲ್ಲೂ ಆಳವಾಗಿ ಬೇರೂರಿರುವ ಪಕ್ಷವಾಗಿದೆ. ಯಡಿಯೂರಪ್ಪರವರು ಏಕಾಂಗಿಯಾಗಿ ಪಕ್ಷ ಬೆಳೆಸಿದರು. ಅನಂತ್‌ಕುಮಾರ್ ಸಹ ಪಕ್ಷ ಸಂಘಟನೆಗೆ ದುಡಿದವರು ಎಂದರು.ಪ್ರತಿ ಚುನಾವಣೆಯನ್ನು ಬಿಜೆಪಿ ಯಡಿಯೂರಪ್ಪರವರು ನೇತೃತ್ವದಲ್ಲೇ ಎದುರಿಸಿದೆ. ಅದರಂತೆ ಈ ಬಾರಿಯೂ ಯಡಿಯೂರಪ್ಪ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಪಕ್ಷವನ್ನು ಕಟ್ಟಿ ಬೆಳೆಸಿದವರು ಯಡಿಯೂರಪ್ಪ' ಎಂದು ಹೇಳಿದರು.
Next Story