ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಸ್ವಿಮಿಂಗ್ ಕ್ಯಾಂಪ್ ಉದ್ಘಾಟನೆ

ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್‌ನ ಸರೋಶ್ ಸ್ಮಾರಕ ಈಜುಕೊಳದಲ್ಲಿ ಎ.3 ರಿಂದ 26ರವರೆಗೆ ಹಾಗೂ ಮೇ 02 ರಿಂದ 25ರವರೆಗೆ ನಡೆಯಲಿರುವ ಸ್ವಿಮಿಂಗ್ ಕ್ಯಾಂಪ್ ಎ.3 ರಂದು ಉದ್ಘಾಟನೆಗೊಂಡಿತು.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲ ರವಿಶಂಕರ್ ಹೆಗಡೆ ದೀಪ ಬೆಳಗಿಸಿ, ಶ್ರೀಗೋಪಾಲಕೃಷ್ಣ ದೇವಸ್ಥಾನದ ಪತ್ರ ತೀರ್ಥವನ್ನು ಈಜುಕೊಳಕ್ಕೆ ಹಾಕಿ ಸ್ವಿಮಿಂಗ್ ಕ್ಯಾಂಪ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸ್ವಿಮಿಂಗ್ ಕ್ಯಾಂಪ್ ಬಹಳಷ್ಟು ಪ್ರತಿಭೆಗಳಿಗೆ ಅವಕಾಶವಾಗಿದೆ. ಮಕ್ಕಳಿಗೂ ಮತ್ತು ಹಿರಿಯರಿಗೂ ಶಿಬಿರದಲ್ಲಿ ಅವಕಾಶವನ್ನು ನೀಡಿದ್ದು ಶಿಬಿರವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭ ಮಂಗಳ ಸ್ವಿಮಿಂಗ್ ಕ್ಲಬ್‌ನ ಕಾರ್ಯದರ್ಶಿ ಶಿವಾನಂದ ಗಟ್ಟಿ, ಸಂಸ್ಥೆಯ ಈಜು ತರಬೇತುದಾರರಾದ ರಾಜೇಶ್ ಖಾರ್ವಿ, ಪ್ರಥಮ್, ತೇಜಸ್ವಿನಿ, ಪ್ರೇರಣ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.