ಮೂಡಬಿದ್ರೆ ಗಂಟಲ್ ಕಟ್ಟೆ ನಿವಾಸಿ ಸೌದಿ ಅರೇಬಿಯಾದಲ್ಲಿ ನಿಧನ

ಮೂಡಬಿದ್ರೆ: ತಾಲ್ಲೂಕಿನ ಗಂಟಾಲ್ಕಟ್ಟೆ ಕಲ್ಲಬೆಟ್ಟು ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ರವಿವಾರ ಸೌದಿ ಅರೇಬಿಯಾದ ದಮಾಮ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ರಹಿಮಾನ್ ಅವರು ಕಳೆದ 28 ವರ್ಷಗಳಿಂದ ದುಬೈ, ಸೌದಿ ಅರೇಬಿಯಾ ಸೇರಿದಂತೆ ವಿದೇಶದಲ್ಲಿ ಉದ್ಯೋಗದಲ್ಲಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುದ್ದಾರೆ.
Next Story