Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ದಿ ನ್ಯೂಯಾರ್ಕ್ ಟೈಮ್ಸ್’ನ ದೃಢೀಕೃತ...

‘ದಿ ನ್ಯೂಯಾರ್ಕ್ ಟೈಮ್ಸ್’ನ ದೃಢೀಕೃತ ಖಾತೆ ಗುರುತನ್ನು ಟ್ವಿಟರ್ ತೆಗೆದಿದ್ದೇಕೆ?

3 April 2023 9:13 PM IST
share
‘ದಿ ನ್ಯೂಯಾರ್ಕ್ ಟೈಮ್ಸ್’ನ ದೃಢೀಕೃತ ಖಾತೆ ಗುರುತನ್ನು ಟ್ವಿಟರ್ ತೆಗೆದಿದ್ದೇಕೆ?

ಹೊಸದಿಲ್ಲಿ: ದಿ ನ್ಯೂಯಾರ್ಕ್ ಟೈಮ್ಸ್ ಟ್ವಿಟರ್ ನಲ್ಲಿ ತನ್ನ ದೃಢೀಕರಣ ಚೆಕ್ ಮಾರ್ಕ್ ಗಳನ್ನು ಕಳೆದುಕೊಂಡಿರುವ ಮೊದಲ ಪ್ರಮುಖ ಪತ್ರಿಕೆಯಾಗಿದೆ. ತನ್ನ ಅಕೌಂಟ್ ಬ್ಯಾಡ್ಜ್ ಅನ್ನು ಉಳಿಸಿಕೊಳ್ಳಲು ತಾನು ಟ್ವಿಟರ್ ಗೆ ಮಾಸಿಕ ಚಂದಾವನ್ನು ಪಾವತಿಸುವುದಿಲ್ಲ ಎಂದು ಪತ್ರಿಕೆಯು ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇತರ ಹಲವಾರು ಪತ್ರಿಕೆಗಳೂ ತಾವು ದೃಢೀಕರಣಕ್ಕಾಗಿ ಶುಲ್ಕವನ್ನು ಪಾವತಿಸುವುದಿಲ್ಲ ಎಂದು ಹೇಳಿದ್ದರೂ ಅವುಗಳ ಚೆಕ್ ಮಾರ್ಕ್ ಗಳು ಸದ್ಯಕ್ಕೆ ಹಾಗೆಯೇ ಉಳಿದುಕೊಂಡಿವೆ.

ಟ್ವಿಟರ್ ಬ್ಲೂಗೆ ಚಂದಾದಾರರಲ್ಲದವರ ಖಾತೆಗಳಿಂದ ದೃಢೀಕೃತ ಚೆಕ್ ಮಾರ್ಕ್ಗಳನ್ನು ತೆಗೆಯುವುದನ್ನು ಕಂಪನಿಯು ಎ.1ರಿಂದ ಆರಂಭಿಸಲಿದೆ ಎಂದು ಟ್ವಿಟರ್ ನ ಸಿಇಒ ಎಲಾನ್ ಮಸ್ಕ್ ಅವರು ಈ ಮೊದಲು ಹೇಳಿದ್ದರು. ಟ್ವಿಟರ್ ಬ್ಲೂ ಕಳೆದ ವರ್ಷ ಜಾರಿಗೆ ಬಂದ ವೇದಿಕೆಯ ಪಾವತಿ ಸೇವೆಯಾಗಿದ್ದು, ಬಳಕೆದಾರರು ದೃಢೀಕರಣ ಗುರುತು ಖರೀದಿಸುವುದನ್ನು ಅಗತ್ಯವಾಗಿಸಿದೆ.

ವ್ಯಕ್ತಿಗತ ಬಳಕೆದಾರರು ಬ್ಯಾಡ್ಜ್ ಪಡೆಯಲು ಮಾಸಿಕ ಎಂಟು ಡಾಲರ್ ಗಳನ್ನು ತೆತ್ತು ಟ್ವಿಟರ್ ಬ್ಲೂ ಸೇವೆಯ ಚಂದಾದಾರಿಕೆಯನ್ನು ಖರೀದಿಸುವುದು ಕಡ್ಡಾಯವಾಗಿದೆ. ಈಗ ದೃಢೀಕರಣಗೊಂಡಿರದ ಉದ್ಯಮಗಳು ತಮ್ಮ ಖಾತೆಯನ್ನು ದೃಢಪಡಿಸುವ ಗೋಲ್ಡ್ ಚೆಕ್ ಮಾರ್ಕ್ ಬೇಕಿದ್ದರೆ ಮಾಸಿಕ 1,000 ಡಾಲರ್ ಗಳನ್ನು ಪಾವತಿಸಬೇಕು. ಭಾರತದಲ್ಲಿಯ ಬಳಕೆದಾರರು ಬ್ಲೂ ದೃಢೀಕೃತ ಬ್ಯಾಡ್ಜ್ಗಾಗಿ ಮಾಸಿಕ 900 ರೂ.ಗಳ ಶುಲ್ಕವನ್ನು ಪಾವತಿಸಬೇಕು ಎಂದು ಟ್ವಿಟರ್ ಕಳೆದ ಮಾರ್ಚ್ ನಲ್ಲಿ ಪ್ರಕಟಿಸಿತ್ತು.

ವೆಬ್ ನಲ್ಲಿ ಚಂದಾದರ ಕಡಿಮೆಯಾಗಿದ್ದು, ಮಾಸಿಕ 650 ರೂ.ಗಳಿಗೆ ನಿಗದಿಗೊಳಿಸಲಾಗಿದೆ. ಟ್ವಿಟರ್ ಭಾರತದಲ್ಲಿ ವೆಬ್ ಗಾಗಿ 6,800 ರೂ.(ಮಾಸಿಕ ಸುಮಾರು 566 ರೂ.)ಗಳ ವಾರ್ಷಿಕ ಚಂದಾ ಸೌಲಭ್ಯವನ್ನೂ ಒದಗಿಸಿದೆ.

ನ್ಯೂಯಾರ್ಕ್ ಟೈಮ್ಸ್ ಶನಿವಾರ ರಾತ್ರಿ ಮತ್ತು ರವಿವಾರ ನಸುಕಿನ ನಡುವೆ ತನ್ನ ಗೋಲ್ಡ್ ವೆರಿಫಿಕೇಷನ್ ಚೆಕ್ ಮಾರ್ಕ್ ಕಳೆದುಕೊಂಡಿರುವಂತಿದೆ. ಮಸ್ಕ್ ಕುರಿತು ಅದು ಟ್ವೀಟಿಸಿದ್ದ ಮೀಮ್ಗೆ ಪ್ರತಿಕ್ರಿಯೆಯಾಗಿ ಅದು ತನ್ನ ಗುರುತನ್ನು ಕಳೆದುಕೊಂಡಿರಬಹುದು. ನ್ಯೂಯಾರ್ಕ್ ಟೈಮ್ಸ್ ನ ಟ್ವಿಟರ್ ಖಾತೆಯು 5.5 ಕೋಟಿ ಗೂ ಅಧಿಕ ಫಾಲೋವರ್ ಗಳನ್ನು ಹೊಂದಿದೆ.

ತಾನು ಟ್ವಿಟರ್ ಬ್ಲೂಗಾಗಿ ಹಣವನ್ನು ಪಾವತಿಸುವುದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದ ಮೀಮ್ ಅನ್ನು ಟ್ವಿಟರ್ ಖಾತೆಯೊಂದು ಶೇರ್ ಮಾಡಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮಸ್ಕ್ ‘ಒಳ್ಳೆಯದು, ಹಾಗಿದ್ದರೆ ಅದನ್ನು ನಾವು ತೆಗೆಯುತ್ತೇವೆ’ ಎಂದು ಟ್ವೀಟಿಸಿದ್ದರು. ನಂತರ ಅಳಿಸಲಾದ ಇನ್ನೊಂದು ಟ್ವೀಟ್ ನಲ್ಲಿ ಮಸ್ಕ್, ತಾವು ಚಂದಾ ತೆರುವುದಿಲ್ಲ ಎಂದು ಅವರು ಹೇಳದಿದ್ದರೆ ಹಣ ಪಾವತಿಸದ ಚೆಕ್ ಮಾರ್ಕ್ಗಳನ್ನು ತೆಗೆದುಹಾಕುವ ಮುನ್ನ ಕೆಲವು ವಾರಗಳ ‘ಗ್ರೇಸ್’ ಅವಧಿಯನ್ನು ನೀಡಲಾಗುವುದು ಎಂದು ತಿಳಿಸಿದ್ದರು.

‘ನಮ್ಮ ಸಾಂಸ್ಥಿಕ ಟ್ವಿಟರ್ ಖಾತೆಗಳಿಗೆ ಚೆಕ್ ಮಾರ್ಕ್ ಸ್ಟೇಟಸ್ಗಾಗಿ ಮಾಸಿಕ ಶುಲ್ಕವನ್ನು ನಾವು ಪಾವತಿಸುವುದಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿರುವ ನ್ಯೂಯಾರ್ಕ್ ಟೈಮ್ಸ್ ನ ವಕ್ತಾರರು, ‘ವರದಿಗಾರಿಕೆ ಉದ್ದೇಶಗಳಿಗೆ ಈ ಸ್ಟೇಟಸ್ ಅಗತ್ಯವಾಗುವ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ವೈಯಕ್ತಿಕ ಖಾತೆಗಳಿಗೆ ಟ್ವಿಟರ್ ಬ್ಲೂಗಾಗಿ ನಮ್ಮ ವರದಿಗಾರರಿಗೆ ನಾವು ಮರುಪಾವತಿಸುವುದಿಲ್ಲ’ ಎಂದು ಹೇಳಿದ್ದಾರೆ.

ಖಚಿತವಾಗಿ ಹೇಳುವುದಾದರೆ, ಸದ್ಯಕ್ಕೆ ನ್ಯೂಯಾರ್ಕ್ ಟೈಮ್ಸ್ ನ ಅಧಿಕೃತ ಟ್ವಿಟರ್ ಖಾತೆಯು ತನ್ನ ದೃಢೀಕರಣ ಗುರುತನ್ನು ಕಳೆದುಕೊಂಡಿದೆ ಮತ್ತು ಕಲೆ, ಅಭಿಪ್ರಾಯ ವಿಭಾಗಗಳಂತಹ ಅದರ ಇತರ ಘಟಕಗಳು ಈಗಲೂ ಬ್ಲೂ ಅಥವಾ ಗೋಲ್ಡ್ ಟಿಕ್ಗಳನ್ನು ಹೊಂದಿವೆ.

ದಿ ವಾಷಿಂಗ್ಟನ್ ಪೋಸ್ಟ್, ಸಿಎನ್ಎನ್ ಮತ್ತು ಲಾಸ್ ಏಂಜಲೀಸ್ ಟೈಮ್ಸ್ ಸೇರಿದಂತೆ ಇತರ ಪ್ರಮುಖ ಪತ್ರಿಕೆಗಳೂ ಟ್ವಿಟರ್ ಬ್ಲೂ ಸೇವೆಗಾಗಿ ಮಾಸಿಕ ಶುಲ್ಕವನ್ನು ಪಾವತಿಸದಿರಲು ನಿರ್ಧರಿಸಿವೆ. ಪತ್ರಿಕೆಗಳು ಮಾತ್ರವಲ್ಲ,ಅಮೆರಿಕದ ಶ್ವೇತಭವನ ಕೂಡ ತನ್ನ ಸಿಬ್ಬಂದಿಗಳ ಅಧಿಕೃತ ಟ್ವಿಟರ್ ಖಾತೆಗಳಿಗೆ ಈ ಶುಲ್ಕವನ್ನು ಪಾವತಿಸುವುದಿಲ್ಲ. ಲೆಬ್ರಾನ್ ಜೇಮ್ಸ್ರಂತಹ ಸೆಲೆಬ್ರಿಟಿಗಳೂ ತಾವು ಟ್ವಿಟರ್ ದೃಢೀಕರಣ ಶುಲ್ಕವನ್ನು ಪಾವತಿಸುವುದಿಲ್ಲ ಎಂದು ಹೇಳಿದ್ದಾರೆ.

ಶುಲ್ಕ ಪಾವತಿಸದಿದ್ದರೆ ಏನಾಗುತ್ತದೆ?

ಟ್ವಿಟರ್ ಬ್ಲೂಗಾಗಿ ಶುಲ್ಕವನ್ನು ಪಾವತಿಸದಿರುವ ಬಳಕೆದಾರರು ಟ್ವಿಟರ್ ವೇದಿಕೆಯಲ್ಲಿ ಕಡಿಮೆ ಗೋಚರವಾಗಲಿದ್ದಾರೆ. ಹೆಚ್ಚಿನ ಬಳಕೆದಾರರಿಗೆ ನಕಲಿ ಖಾತೆಗಳು ಮತ್ತು ನಿಜವಾದ ಖಾತೆಗಳನ್ನು ಗುರತಿಸುವುದು ಕಷ್ಟವಾಗಬಹುದು.

share
Next Story
X