ಐಪಿಎಲ್: ಲಕ್ನೊ ಸೂಪರ್ ಜೈಂಟ್ಸ್ ಗೆ 218 ರನ್ ಗುರಿ ನೀಡಿದ ಚೆನ್ನೈ
ಗಾಯಕ್ವಾಡ್-ಕಾನ್ವೇ ಭರ್ಜರಿ ಜೊತೆಯಾಟ

ಗಾಯಕ್ವಾಡ್-ಕಾನ್ವೇ ಭರ್ಜರಿ ಜೊತೆಯಾಟ
ಚೆನ್ನೈ, ಎ.3: ಋತುರಾಜ್ ಗಾಯಕ್ವಾಡ್(57 ರನ್, 31 ಎಸೆತ) ಹಾಗೂ ಡಿವೊನ್ ಕಾನ್ವೆ(47 ರನ್, 29 ಎಸೆತ)ಮೊದಲ ವಿಕೆಟಿಗೆ ಸೇರಿಸಿದ 110 ರನ್ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ನ 6ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿದೆ.
ಸೋಮವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಪರ ಅಂಬಟಿ ರಾಯುಡು(ಔಟಾಗದೆ 27), ಶಿವಂ ದುಬೆ(27 ರನ್), ಮೊಯಿನ್ ಅಲಿ(19 ರನ್)ಹಾಗೂ ಎಂ.ಎಸ್. ಧೋನಿ(12 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಲಕ್ನೊ ಪರ ಮಾರ್ಕ್ ವುಡ್(3-49) ಹಾಗೂ ರವಿ ಬಷ್ನೋಯ್(3-28) ತಲಾ 3 ವಿಕೆಟ್ ಗಳನ್ನು ಪಡೆದರು.
Next Story





