ಪಾಂಬೂರು: ಭಕ್ತಿ ಸೋಭಾಣ್ ಗೀತಾ ಗಾಯನ ಕಾರ್ಯಕ್ರಮ

ಶಿರ್ವ: ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಪರಿಚಯ ಪಾಂಬೂರು ಇದರ ಆಶ್ರಯದಲ್ಲಿ ರವಿವಾರ ವಿಶ್ವಕೊಂಕಣಿ ಕಲಾರತ್ನ ಎರಿಕ್ ಒಝೇರಿಯೊ ನಿರ್ದೇಶನದಲ್ಲಿ ಮಾಂಡ್ ಸೋಭಾಣ್ ಮಂಗಳೂರು ತಂಡ ದವರಿಂದ ಭಕಿ ಸೋಭಾಣ್ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಜೆರಾಲ್ಡ್ ಪಿಂಟೊ ಪಾಂಬೂರಿನ ಮಾತನಾಡಿ, ಸುಂದರ ಪ್ರಾಕೃತಿಕ ಪರಿಸರದಲ್ಲಿ ಕೊಂಕಣಿ ಸಾಹಿತ್ಯ ಸಂಸ್ಕೃತಿಯ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಕಲಾಸೇವೆ ಅವಿಸ್ಮರಣೀಯ. ಎರಿಕ್‌ರವರ ರಕ್ತದಲ್ಲಿಯೇ ಕಲಾಗಾರಿಕೆ ಸೇರಿಕೊಂಡಿದೆ. ಈ ಪರಂಪರೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪರಿಚಯ ಆಡಳಿತ ಟ್ರಸ್ಟಿ ಡಾ.ವಿನ್ಸೆಂಟ್ ಆಳ್ವ, ಅಧ್ಯಕ್ಷ ಅನಿಲ್ ಡೇಸಾ, ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ, ವಿಶೇಷ ಅಹ್ವಾನಿತರಾದ ರೆ.ಫಾ.ಡೇನಿಸ್ ಡೇಸಾ, ರೆ.ಫಾ.ಹೆನ್ರಿ ಮಸ್ಕರೇನ್ಹಸ್, ಪರಿಚಯ ಬಳಗದ ಸದಸ್ಯರು, ಕಲಾಭಿಮಾನಿಗಳು ಉಪಸ್ಥಿತರಿದ್ದರು. ಜೋಶಿಲ್ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿಶ್ವಕೊಂಕಣಿ ಕಲಾರತ್ನ ಎರಿಕ್ ಒಝೇರಿಯೊ ಜೋಯ್ಸ್ ಒಝೇರಿಯೊ ನೇತೃತ್ವದ ಮಾಂಡ್ ಸೋಭಾಣ್ ಮಂಗಳೂರು ಕಲಾವಿದರಿಂದ ಭಕಿತಿ ಸೋಭಾಣ್ ಗೀತಾ ಗಾಯನ ಕಾರ್ಯಕ್ರಮ ಜರಗಿತು. ಲೊಯ್ಡ್ ರೇಗೋ ಕಾರ್ಯಕ್ರಮ ನಿರೂಪಿಸಿದರು.







