ಬೆಂಗಳೂರು: ಪೊಲೀಸರು ಬಂಧಿಸುವ ಆತಂಕದಲ್ಲಿ ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿ ಸಾವು?
ಪೋಷಕರಿಂದ ಕೊಲೆ ಆರೋಪ

ಬೆಂಗಳೂರು, ಎ.3: ಪೊಲೀಸರು ಸೆರೆ ಹಿಡಿಯುತ್ತಾರೆ ಎನ್ನುವ ಆತಂಕದಲ್ಲಿ ವ್ಯಕ್ತಿಯೊರ್ವ ರೈಲ್ವೇ ಮೇಲ್ಸುತುವೆಯಿಂದ ಜಿಗಿದು ಮೃತಪಟ್ಟಿರುವ ಘಟನೆವೊಂದು ವರದಿಯಾಗಿದೆ.
ಶ್ರೀರಾಂಪುರದ ಸ್ವತಂತ್ರಪಾಳ್ಯದ ನಿವಾಸಿ ಅಬ್ರಹಾಂ(30) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ನಿರ್ಜನಪ್ರದೇಶದಲ್ಲಿ ಗಾಂಜಾಸೇದುತ್ತಿದ್ದ ಇಬ್ಬರುವ್ಯಕ್ತಿಗಳ ಜೊತೆ ಅಬ್ರಹಾಂ ನಿಂತಿದ್ದ ಎನ್ನಲಾಗಿದ್ದು, ಈ ವೇಳೆ ಪೊಲೀಸರುದಾಳಿ ನಡೆಸಿದ್ದಾರೆ. ಇದರಿಂದ ಗಬರಿಗೊಂಡ ಅಬ್ರಹಾಂ, ಭಯದಲ್ಲಿ ಓಡಿದ್ದು, ರೈಲ್ವೇ ಮೇಲ್ಸುತುವೆಯಿಂದ ಜಿಗಿದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.
ಮಗನ ಕೊಲೆ: ಈ ಕುರಿತು ಅಬ್ರಹಾಂ ತಂದೆ ಶಂಕರ್ ಪ್ರತಿಕ್ರಿಯಿಸಿ, ನನ್ನಮಗನಮೇಲೆ ಪೊಲೀಸರೇ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಅದರಲ್ಲೂ ನನ್ನ ಮಗ ಗಾಂಜಾ ಸೇದುವ ಚಟ ಬಿಟ್ಟು ಒಳ್ಳೆಯವನಾಗಿದ್ದ. ಇಂದು ಮಧ್ಯಾಹ್ನ ಊಟ ಮಾಡಲು ಮನೆಗೆ ಬಂದಿದ್ದು, ಊಟದ ನಂತರ ಕೆಲಸ ನಿಮಿತ್ತ ಹೊರಗೆ ಹೋಗಿದ್ದ. ಈ ವೇಳೆ ಅಬ್ರಹಾಂನನ್ನು ಹಿಡಿದು ಪೊಲೀಸರು ಹಲ್ಲೆ ಮಾಡಿದ್ದಾರೆ. ಆತನ ಶವದ ಮೇಲೆ ಪೊಲೀಸರ ಬೂಟಿನ ಗುರುತುಗಳಿದ್ದು, ಈ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಘಟನೆ ಸಂಬಂಧ ಅಬ್ರಹಾಂ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದಯ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.







