ದೇರಳಕಟ್ಟೆ: ಎಸ್ಸೆಸ್ಸೆಫ್‌ನಿಂದ ‘ಫುಹ್ರೆರ್ ಕೋನ್ವರ್ಜ್’ ತರಬೇತಿ, ಇಫ್ತಾರ್ ಕೂಟ

ಮಂಗಳೂರು: ಎಸ್ಸೆಸ್ಸೆಫ್ ದೇರಳಕಟ್ಟೆ ಡಿವಿಶನ್ ವತಿಯಿಂದ ‘ಫುಹ್ರೆರ್ ಕೋನ್ವರ್ಜ್’, ಯುನಿಟ್ ಪಿಎಸ್‌ಟಿ ಹಾಗೂ ಸೆಕ್ಟರ್ ಕಾರ್ಯಾಕಾರಿ ಸಮಿತಿ ನಾಯಕರ ಸಭೆ ಮತ್ತು ಇಫ್ತಾರ್ ಮೀಟ್ ರವಿವಾರ ದೇರಳಕಟ್ಟೆಯ ತಾಜುಲ್ ಉಲಮಾ ಮಸೀದಿ ದೇರಳಕಟ್ಟೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಸ್‌ವೈಎಸ್ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ಇಸ್ಹಾಕ್ ಝುಹ್ರಿ ಉಧ್ಘಾಟಿಸಿದರು. ಅಧ್ಯಕ್ಷತೆಯನ್ನು ದೇರಳಕಟ್ಟೆ ಡಿವಿಶನ್ ಅಧ್ಯಕ್ಷ ನೌಫಲ್ ಅಹ್ಸನಿ ವಹಿಸಿದ್ದರು. ಯುನಿಟ್ ಪಿಎಸ್‌ಟಿ ಹಾಗೂ ಸೆಕ್ಟರ್, ಡಿವಿಶನ್ ನಾಯಕರುಗಳಿಗೆ ‘ಫುಹ್ರೆರ್ ಕೋನ್ವರ್ಜ್’ ವಿಶೇಷ ತರಬೇತಿಯನ್ನು ಇರ್ಫಾನ್ ಅಬ್ದುಲ್ಲಾ ನೂರಾನಿ ನಡೆಸಿಕೊಟ್ಟರು.
ಅತಿಥಿಯಾಗಿ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ಮನ್ಸೂರ್ ಹಿಮಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಿವಿಶನ್ ಕಾರ್ಯದರ್ಶಿ ಮುಸ್ತಫಾ ತೋಕರಬೆಟ್ಟು ಸ್ವಾಗತಿಸಿದರು. ಸುಹೈಲ್ ಶಾಂತಿಬಾಗ್ ವಂದಿಸಿದರು.
Next Story