ಅಮೆರಿಕಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಚಂದ್ರಯಾನ ಕೈಗೊಳ್ಳಲಿರುವ ಪ್ರಥಮ ಮಹಿಳೆ

ವಾಷಿಂಗ್ಟನ್: ಚಂದ್ರನ ಕುರಿತು ಮಾನವ ಜನಾಂಗ ಅನ್ವೇಷಿಸಲು ಶುರುವಾದಾಗಿನಿಂದ ಇದೇ ಪ್ರಪ್ರಥಮ ಬಾರಿಗೆ ಅಮೆರಿಕಾದ ಗಗನಯಾತ್ರಿ ಕ್ರಿಸ್ಟಿನಾ ಹ್ಯಾಮೋಕ್ ಕೋಚ್ (Christina Koch) ಚಂದ್ರಯಾನ ಕೈಗೊಳ್ಳಲಿರುವ ಮಹಿಳೆಯಾಗಲಿದ್ದಾರೆ. ಚಂದ್ರನ ಸುತ್ತ ಯಾನ ಬೆಳೆಸಲಿರುವ ಓರಿಯಾನ್ ಅಂತರಿಕ್ಷ ವಾಹನದಲ್ಲಿ ನಾಲ್ವರು ಗಗನ ಯಾತ್ರಿಗಳು ಪ್ರಯಾಣ ಬೆಳೆಸಲಿದ್ದು, ಈ ಪೈಕಿ ಕ್ರಿಸ್ಟಿನಾ ಕೋಚ್ ಯಾತ್ರೆಯ ತಜ್ಞರಾಗಿರುತ್ತಾರೆ ಎಂದು ನಾಸಾ (NASA) ಪ್ರಕಟಿಸಿದೆ.
ಇಲ್ಲಿಯವರೆಗೆ ಪುರುಷರು ಮಾತ್ರ ಚಂದ್ರ ಕಕ್ಷೆ ಪ್ರಯಾಣ ಬೆಳೆಸಿದ್ದರು ಹಾಗೂ ಅದರ ಮೇಲೆ ಇಳಿದಿದ್ದರು. ಆದರೆ, ಚಂದ್ರನ ಕಕ್ಷೆಯನ್ನು ಇದೇ ಪ್ರಥಮ ಬಾರಿಗೆ ಮಹಿಳಾ ಗಗನಯಾನಿಯೊಬ್ಬರು ಸುತ್ತುವುದಕ್ಕೆ ಈ ಹೊಸ ಅಂತರಿಕ್ಷ ಪ್ರಯಾಣ ಸಾಕ್ಷಿಯಾಗಲಿದೆ. ಕ್ರಿಸ್ಟಿನಾ ಕೋಚ್ ಜೊತೆಗೆ ಗಗನಯಾತ್ರಿಗಳಾದ ಜೆರೆಮಿ ಹ್ಯಾನ್ಸೆನ್, ವಿಕ್ಟರ್ ಗ್ಲೋವರ್ ಹಾಗೂ ರೀಡ್ ವೈಸ್‌ಮನ್ 10 ದಿನಗಳ ಅವಧಿಯ ಚಂದ್ರಯಾನ ಕೈಗೊಳ್ಳಲಿದ್ದಾರೆ ಎಂದು ನಾಸಾ ಪ್ರಕಟಿಸಿದೆ.
Next Story