ಬಿಸಿಲಿನ ಧಗೆ: ಉಚಿತ ಕುಡಿಯುವ ನೀರಿನ ವ್ಯವಸ್ಥೆ

ಉಡುಪಿ, ಎ.4: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತತ್ತರಿಸುತ್ತಿ ರುವ ಹಿರಿಯ ನಾಗರಿಕರು, ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ನಗರದ ಮಾರುಥಿ ವಿಥಿಕಾ ರಸ್ತೆಯ ಜೋಸ್ ಅಲುಕಾಸ್ ಬಳಿ ಉಚಿತ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಐದನೇ ವರ್ಷದ ಈ ಸಾಮಾಜಿಕ ಕಾರ್ಯಕ್ಕೆ ಉಡುಪಿ ಜೋಸ್ ಅಲುಕಾಸ್ ಸಹಕಾರ ನೀಡಿದ್ದು, ಮಳೆಗಾಲ ಆರಂಭದವರೆಗೆ ಈ ವ್ಯವಸ್ಥೆ ಮುಂದುವರೆಯ ಲಿದೆ. ಮಾರುಥಿ ವಿಥಿಕಾದ ಬಳಿ ಹೋಗುವ ಜನರಿಗೆ ಉಚಿತ ಬೆಲ್ಲ ನೀರು ನೀಡಲಾಗುವುದು. ಮಾತ್ರವಲ್ಲದೇ ಹಬ್ಬ ಹಾಗೂ ವಿಶೇಷ ದಿನಗಳಂದು ಪಾನಕ, ಜ್ಯೂಸ್ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.
ಉಚಿತ ಕುಡಿಯುವ ನೀರಿನ ವ್ಯವಸ್ಥೆಗೆ ಉದ್ಯಮಿ ಉದಯ್ ಕುಮಾರ್ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜೋಸ್ ಅಲುಕಾಸ್‌ನ ಮ್ಯಾನೇಜರ್ ರಾಜೇಶ್ ಎನ್. ಆರ್., ಗೋಪಾಲ್, ಗಣೇಶ್ ಪಿಲಾರ್ ಮುಂತಾದವರು ಉಪಸ್ಥಿತರಿದ್ದರು.
Next Story